ಎಣ್ಮೂರು : ಶಾಲೆಯಲ್ಲಿ ಮೆಟ್ರಿಕ್ ಮೇಳ

0

ಎಣ್ಮೂರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಜ.13 ರಂದು ಮೆಟ್ರಿಕ್ ಮೇಳ ನಡೆಯಿತು.
ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಷರೀಫ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಮತ್ತು ಊರ ವಿಧ್ಯಾಬಿಮಾನಿಗಳು ಭಾಗವಹಿಸಿದ್ದರು.

ಮುಖ್ಯಶಿಕ್ಷಕಿ ಶ್ರೀಮತಿ ಭುವನೇಶ್ವರಿ ಸ್ವಾಗತಿಸಿದರು.
ಮೆಟ್ರಿಕ್ ಮೇಳ ದಲ್ಲಿ ವಿಧ್ಯಾರ್ಥಿಗಳ ಮಾರಾಟ ಮಳಿಗೆಗಳು ಎಲ್ಲರನ್ನೂ ಆಕರ್ಷಿಸಿದವು. ವಿವಿಧ ತರಕಾರಿಗಳು,ಹಣ್ಣುಗಳು,
ತಿಂಡಿ ತಿನಿಸುಗಳ ಅಂಗಡಿಗಳು ಗ್ರಾಹಕರನ್ನು ಸೆಳೆದವು.
ಎಡಮಂಗಲ ಪಂಚಾಯತ್ ಸದಸ್ಯ ಮಾಯಿಲಪ್ಪ ಗೌಡ, ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ಸುರೇಖಾ, ಸಹಶಿಕ್ಷಕಿ ಶ್ರೀಮತಿ ಶಾಂತಮ್ಮ,ಅತಿಥಿ ಶಿಕ್ಷಕಿಯಾದ ಕು.ಗುಲಾಬಿ ಮತ್ತು ಜ್ಞಾನ ದೀಪ ಶಿಕ್ಷಕರಾದ ಶ್ರೀಮತಿ ಸೌಮ್ಯ ಉಪಸ್ಥಿತರಿದ್ದು ಸಹಕರಿಸಿದರು.