ಅಮ್ಮ ಮಗಳಿಬ್ಬರಿಗೂ ಒಂದೇ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ !

0

ನಾಡಿನ ಸಮಾಚಾರ ಸೇವಾ ಸಂಘ (ರಿ)ಗೋಕಾಕ ಮತ್ತು ನಾಡಿನ ಸಮಾಚಾರ ದಿನಪತ್ರಿಕೆ ಇದರ ಸಂಯುಕ್ತ ಆಶ್ರಯದಲ್ಲಿ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ಇವರ ಜಯಂತಿ ನಿಮಿತ್ಯ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಭವನದಲ್ಲಿ ನಡೆದ ಸಂಸ್ಮರಣೆ ಕಾರ್ಯ ಕ್ರಮದಲ್ಲಿ ಡಾ. ರಾಜೇಶ್ವರಿರವರಿಗೆ ಕರ್ನಾಟಕ ಸಾಧಕರತ್ನ ರಾಜ್ಯ ಪ್ರಶಸ್ತಿ ನೀಡಲಾಯಿತು.

ಉತ್ತರ ಕರ್ನಾಟಕದ ಹಲವು ಸಾಹಿತ್ಯ ಬಳಗಗಳಲ್ಲಿ ಸಕ್ರಿಯವಾಗಿದ್ದುದನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.ನಿವೃತ್ತ ಶಿಕ್ಷಕರಾದ ಮೇದಪ್ಪ ಮೇರ್ಕಜೆ ಹಾಗೂ ಭುವನೇಶ್ವರಿಯವರ ಪುತ್ರಿಯಾಗಿರುವ ಇವರು ಸಂಪಾಜೆ ಕಳಗಿ ಡಾ. ಗೌತಮ್ ರವರ ಪತ್ನಿ. ಇದೇ ವೇದಿಕೆಯಲ್ಲಿ ಇವರ ಪುತ್ರಿ ಯೋಗ ಪಟು ಗೌರಿತಾ ಕೆ. ಜಿ. ಗೆ ಸಾವಿತ್ರಿ ಬಾಯಿ ಪುಲೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಯೋಗಾಸನದಲ್ಲಿ ಹಲವು ರೆಕಾರ್ಡ್ ಹಾಗೂ ಸಾಧನೆಗಳನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.ಈಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವಳು ಯೋಗಾಭ್ಯಾಸವನ್ನು ಯೋಗ ಗುರು ಶರತ್ ಮರ್ಗಿಲಡ್ಕ ರವರಲ್ಲಿ ಅಮರ ಯೋಗ ಕೇಂದ್ರ ಗುತ್ತಿಗಾರಿನಲ್ಲಿ ಪಡೆಯುತ್ತಿದ್ದಾಳೆ.