







ಜಯನಗರ ಜನ್ನತುಲ್ ಉಲೂಂ ಮಸ್ಜಿದ್ ಅಂಡ್ ಮದರಸಾ ವತಿಯಿಂದ ನಡೆಸಿಕೊಂಡು ಬರುತ್ತಿರುವ ಅಜ್ಮೀರ್ ಮೌಲೂದ್ ಕಾರ್ಯಕ್ರಮದ ೬ನೇ ವಾರ್ಷಿಕ ಅಜ್ಮೀರ್ ಅಂಡ್ ನೇರ್ಚೆ ಹಾಗೂ ಏಕದಿನ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದ ಪ್ರಚಾರ ಪತ್ರವನ್ನು ಜ.೧೯ ರಂದು ಜುಮಾ ನಮಾಜ್ ಬಳಿಕ ಮೊಗರ್ಪಣೆ ಮಾಂಬ್ಳಿ ವಲಿಯವರ ದರ್ಗಾದಲ್ಲಿ ಬಿಡುಗಡೆಗೊಳಿಸಲಾಯಿತು.
ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಸೌಖತ್ ಅಲಿ ಸಖಾಫಿ ದುವಾ ನೆರವೇರಿಸಿ ಪ್ರಚಾರ ಪತ್ರವನ್ನು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಮೊಗರ್ಪಣೆ ಎಚ್ ಐ ಜೆ ಕಮಿಟಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸೀ ಫುಡ್, ಕಟ್ಟಡ ಸಮಿತಿ ಸಂಚಾಲಕ ಹಾಜಿ ಅಬ್ದುಲ್ ಸಮದ್,ಸದಸ್ಯರುಗಳಾದ ಜಿ ಕೆ ಅಬ್ದುಲ್ ರಜಾಕ್,ಮುನೀರ್ ಸಿಲೋನ್, ಮುಅಲ್ಲಿಮರಾದ ಮೂಸಾ ಮುಸ್ಲಿಯಾರ್,ಜಯನಗರ ಜನ್ನತುಲ್ ಉಲೂಂ ಮಸ್ಜಿದ್ ಅಂಡ್ ಮದ್ರಸಾ ಸಮಿತಿ ಅಧ್ಯಕ್ಷ ಮಹಮ್ಮದ್ ಮುಟ್ಟೆತೋಡಿ,ಪ್ರಧಾನ ಕಾರ್ಯದರ್ಶಿ ಹಸೈನಾರ್ ಜಯನಗರ,ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಮೊಹಮ್ಮದ್ ಹನೀಫ್ ಪೋಸೋಟ್,ಸ್ಥಳೀಯರಾದ ತಾಜುದ್ದೀನ್ ಸಖಾಫಿ,ಕರ್ನಾಟಕ ಮುಸ್ಲಿಂ ಜಮಾಅತ್ ಮೊಗರ್ಪಣೆ ಯೂನಿಟ್ ಕಾರ್ಯದರ್ಶಿ ಮುಸ್ತಫಾ ಸೇರಿದಂತೆ ಸ್ಥಳೀಯ ಜಮಾಅತ್ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









