ಕಾನೂನು ಯುನಿವರ್ಸಿಟಿ ಮಟ್ಟದ ಕ್ರಾಸ್ ಕಂಟ್ರಿ ರೇಸ್ ಸಮಾರೋಪ

0

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವತಿಯಿಂದ, ಕೆ.ವಿ.ಜಿ. ಕಾನೂನು ಕಾಲೇಜಿನ ಆತಿಥ್ಯದಲ್ಲಿ ಸುಳ್ಯದಲ್ಲಿ ಇಂದು ನಡೆದ ಕ್ರಾಸ್ ಕಂಟ್ರಿ ರೇಸ್ ನ ಸಮಾರೋಪ ಸಮಾರಂಭ ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ವಹಿಸಿದ್ದರು. ನಾಟಕ ಕಲಾವಿದ ಹಾಗೂ ಚಿತ್ರನಟ ಪ್ರಕಾಶ್ ತುಮಿನಾಡು ಹಾಗೂ ಖ್ಯಾತ ಅಥ್ಲೆಟ್ ನಮಿತಾ ಗೋಳ್ಯಾಡಿ ಮುಖ್ಯ ಅತಿಥಿಯಾಗಿದ್ದರು. ವಿ.ವಿ. ಕ್ರೀಡಾ ನಿರ್ದೇಶಕ ಡಾ.ಖಾಲಿದ್ ಖಾನ್ , ಅಕಾಡೆಮಿ ಕಾರ್ಯದರ್ಶಿ ಕೆ.ವಿ.ಹೇಮನಾಥ್, ಎನ್.ಎಂ.ಸಿ. ದೈಹಿಕ ಶಿಕ್ಷಣ ನಿರ್ದೇಶಕ ಲೆ.ಸೀತಾರಾಮ ಮಲ್ಲಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಂಶುಪಾಲ ಪ್ರೊ.ಉದಯಕೃಷ್ಣ ಬಿ. ಸ್ವಾಗತಿಸಿದರು. ಲೆ.ಸೀತಾರಾಮ ಮಲ್ಲಾರ ವಂದಿಸಿದರು. ಶ್ರೀಮತಿ ಟೀನಾ ಮತ್ತು ಶ್ರೀಮತಿ ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.