ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ

0

ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವವು ಜ.16 ರಿಂದ ಜ.19 ರವರೆಗೆ ನಡೆಯಿತು.

ಜ.16 ರ ಬೆಳಗ್ಗೆ ಅಶ್ವತ್ಥ ಪ್ರತಿಷ್ಠಾಂಗ ಪೂರ್ವ ಭಾವಿ‌ ವೈದಿಕ ಕಾರ್ಯಕ್ರಮ, ನಾಗನಲ್ಲಿ ಅನುಜ್ಜಾ ಕಲಶ‌ ಪ್ರಾರ್ಥನೆ, ನಡೆಯಿತು. ಬಳಿಕ‌ ಅಪರಾಹ್ಮ ಹಸಿರುವಾಣಿ ಸಮರ್ಪಣೆ ನಡೆಯಿತು. ಜ.17 ರಂದು ಮುಂಜಾನೆ ಅಶ್ವತ್ಥ ಹಾಗೂ ನಾಗ ಪ್ರತಿಷ್ಠಾಗ ಹೋಮ, ಆಶ್ಲೇಷ ಬಲಿ, ಅಶ್ವತ್ಥ ನಾರಯಾಣ ಪ್ರತಿಷ್ಠೆ, ಅಶ್ವತ್ಥ ಉಪನಯನ, ಅಶ್ವತ್ಥ ವಿವಾಹ, ಬಳಿಕ ನಾಗ ಸಾನಿದ್ಯ ಪ್ರತಿಷ್ಠೆ ನಡೆದು ಶ್ರೀ ಗಣಪತಿಹವನ, ಕಲಾಭಿಷೇಕ, ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ ನಡೆದು ಅನ್ನಸಂತರ್ಪಣೆ ನಡೆಯಿತು.

ಸಂಜೆ ಕುಣಿತ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜ್ರಂಭಣೆಯಿಂದ ಜರಗಿದವು, ರಾತ್ರಿ ವಿಶೇಷ ಕಾರ್ತಿಕ ಪೂಜೆಯಲ್ಲಿ ನಡೆದು, ರಾತ್ರಿ ಕಟ್ಟ ಚಾವಡಿಯಿಂದ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು.  ಅಂದು ರಾತ್ರಿ ವಿಶೇಷ ಹರಿಕಥೆ ಕಾರ್ಯಕ್ರಮ ನಡೆಯಿತು. ಬಳಿಕ ನೃತ್ಯ ಕಾರ್ಯಕ್ರಮ ನಡೆಯಿತು.

ಜ.18  ಪೂರ್ವಾಹ್ನ ದೇವಸ್ಥಾನದಲ್ಲಿ ದೈವಗಳ ನೇಮ ನಡೆಯಿತು. ಅಪರಾಹ್ನ ದೇವಸ್ಥಾನದಿಂದ ಮಿತ್ತೋಡಿಗೆ  ಭಂಡಾರ ಹೋಗಲಿದೆ. ಅದೇ ದಿನ‌ರಾತ್ರಿ ಚಾಳೆಪ್ಪಾಡಿ ಗಾಣಿಗ‌ಮಜಲು ಎಂಬಲ್ಲಿ ಶ್ರೀ ಅಗ್ನಿಗುಳಿಗರಾಜ ನೇಮೋತ್ಸವ‌ ನಡೆಯಿತು. ಮರುದಿನ ಬೆಳಗ್ಗೆಮಿತ್ತೋಡಿಯಲ್ಲಿ ದೈವಗಳ ನೇಮ ನಡೆಯಿತು.
ಕಾರ್ಯಕ್ರಮ ಯಶಸ್ವಿಗೆ ಗೌರವಾಧ್ಯಕ್ಷ ಕಟ್ಟ ನಾರಾಯಣಯ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕಟ್ಟ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀಮತಿ ಪದ್ಮಾವತಿ ಎಂ.ಎಚ್, ಎಂ.ಎಸ್ ವೇದಾವತಿ ಮುಳ್ಳುಬಾಗಿಲು , ಪದ್ಮಯ್ಯ ಕೊಳಗೆ, ಹೇಮಂತ್ ದೋಲನಮನೆ, ವಿಶ್ವನಾಥ ಕೊಮ್ಮೆಮನೆ, ಚಂದ್ರಶೇಖರ ಕೊಂದಾಳ, ಹರ್ಷ ಅಡ್ನೂರುಮಜಲು, ಅರ್ಚಕ ಕೃಷ್ಣಮೂರ್ತಿ ಭಟ್, ಆದಿಯಾಗಿ ವಿವಿಧ ಸಮಿತಿಗಳ ಪದಾಧಿಕಾರಿಗಳಾಗಿ ಸಹಕರಿಸಿದರು.