ವಿಕಲಚೇತನರ ಕಾರ್ಯಕರ್ತರ ಎಂ ಅರ್ ಡಬ್ಲ್ಯೂ, ವಿ ಅರ್ ಡಬ್ಲ್ಯೂ, ಯು.ಅರ್.ಡಬ್ಲ್ಯೂ ರವರ ಪ್ರಗತಿ ಪರಿಶೀಲನಾ ಸಭೆ ದಕ್ಷಿಣ ಕನ್ನಡ ಅಂಗವಿಕಲರ ಕಲ್ಯಾಣ ಅಧಿಕಾರಿ ಭಾಸ್ಕರ್ ಜೆ ಅವರ ಅಧ್ಯಕ್ಷತೆಯಲ್ಲಿ ಇಂದು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ನಡೆಯಿತು.
ಸಿಡಿಪಿಓ ಶೈಲಜಾ ಮತ್ತು ಎಂಅರ್ ಡಬ್ಲ್ಯೂ ಚಂದ್ರಶೇಖರ್ ಹಾಜರಿದ್ದರು.









ಇದೇ ಸಂದರ್ಭ ಸೆಲ್ಕೋ ಸೋಲಾರ್ ನವರ ಮಾಹಿತಿ ಕಾರ್ಯಕ್ರಮ ನಡೆಯಿತು.
ನಂತರ ತಾಲೂಕಿನ ಕಾರ್ಯಕರ್ತರ ಸಭೆ ನಡೆಸಲಾಯಿತು.

ವಿಕಲಚೇತನರ ತಾಲೂಕಿನ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ರಾಜ್ಯ ಸಮಿತಿ ನಿರ್ದೇಶಕ ಪ್ರವೀಣ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಅಧ್ಯಕ್ಷೆ ಮೀನಾಕ್ಷಿ, ಜಿಲ್ಲಾ ಪತ್ರಿಕಾ ಸಂಚಾಲಕ ಪುಟ್ಟಣ್ಣ ವಿ, ತಾಲೂಕು ಕಾರ್ಯದರ್ಶಿ ಉಮಾವತಿ, ತಾಲ್ಲೂಕಿನ ಎಲ್ಲ ಕಾರ್ಯಕರ್ತರು ಹಾಜರಿದ್ದು ಅವರರವರ ಪಂಚಾಯತ್ ಗಳ ಬಗ್ಗೆ ಚರ್ಚಿಸಿದರು.









