ಫೆ.1 ಮತ್ತು ಫೆ. 2ರಂದು ಎಲಿಮಲೆಯಲ್ಲಿ ನುಸ್ರತ್ ರೂಬಿ ಜುಬಿಲಿ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

0

ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ಎಲಿಮಲೆ ಇದರ ರೂಬಿ ಜುಬಿಲಿ ಪ್ರಯುಕ್ತ ಫೆ 1 ಮತ್ತು 2 ರಂದು ನಡೆಯುವ ಸಾಮಾಜಿಕ ನಾಯಕರ ಸಮಾವೇಶ, ಕಟ್ಟಡ ಉದ್ಘಾಟನೆ , ಸಾಧಕರಿಗೆ ಸನ್ಮಾನ, ಧಾರ್ಮಿಕ ಉಪನ್ಯಾಸ, ಹಾಗೂ ಅರಿವಿನ್ ನಿಲಾವ್ ಆತ್ಮೀಯ ಮಜ್ಲಿಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಎಲಿಮೆಲೆ ಜುಮಾ ಮಸೀದಿಯಲ್ಲಿ ಜರಗಿತು.

ಫೈಝಲ್ ಸಖಾಫಿ ದುವಾಶಿರ್ವಚನ ಮಾಡಿದರು.


ಕಾರ್ಯಕ್ರಮವನ್ನು ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ರವರು
ಜಮಾಅತ್ ಕಮಿಟಿ ಮಾಜಿ ಅಧ್ಯಕ್ಷ ಮೂಸ ಹಾಜಿ ಯವರಿ ನೀಡುವುದರ ಮೂಲಕ ಬಿಡುಗಡೆಗೊಳಿಸಲಾಯಿತು. ಅಬ್ದುಲ್ಲ ಹಾಜಿ ಬಟ್ರಬಯಲು,
ನುಸ್ರತ್ ಉಪಾಧ್ಯಕ್ಷ ಸೂಫಿ ಮುಸ್ಲಿಯಾರ್ ಮತ್ತು ಜಿ ಎಸ್ ಅಬ್ದುಲ್ಲ, ಅಬೂಬಕ್ಕರ್ ಪಾಣಾಜೆ, ಮಹಮದ್ ಕುಂಞಿ ಮೇಲೆ ಬೈಲು, ಜಮಾಅತ್ ಕಾರ್ಯದರ್ಶಿ ಹೈದರ್ ಹಾಜಿ, ನುಸ್ರತ್ ಕಾರ್ಯದರ್ಶಿ ಸೂಫಿ ಎಲಿಮಲೆ, ಕೋಶಾಧಿಕಾರಿ ಅಬ್ದುಲ್ ಕಾದರ್ ಪಾಣಾಜೆ.
ಮಹಮ್ಮದ್ ಹಾಜಿ ಹರ್ಲಡ್ಕ, ಶಿಹಾಬ್, ಬಾತಿಶಾ, ಕಾದರ್ ಅತ್ತಿಮಾರಡ್ಕ, ಇಬ್ರಾಹಿಂ ಜೀರ್ಮಕಿ, ಅಬ್ದುಲ್ಲ ಮೆತ್ತಡ್ಕ,ಸಲ್ಮಾನುಲ್ ಫಾರಿಸ್ ಹಿಮಮಿ,ಝಕರಿಯಾ ಸಅದಿ ನಿಯಾಝ್ ಎಲಿಮಲೆ ಹಾಗೂ ಜಮಾಅತರು ಉಪಸ್ಥಿತರಿದ್ದರು