ಫೆ.8ರಂದು ಕಂದ್ರಪ್ಪಾಡಿ ಶಾಲಾ ಶತಮಾನೋತ್ಸವ – ಆಮಂತ್ರಣ ಪತ್ರಿಕೆ‌ ಬಿಡುಗಡೆ

0

ಸ.ಹಿ.ಪ್ರಾ.ಶಾಲೆ ಕಂದ್ರಪ್ಪಾಡಿ ಶತಮಾನೋತ್ಸವ ದ ಸಂಭ್ರಮದಲ್ಲಿದ್ದು, ಫೆ.8ರಂದು ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಆ ಪ್ರಯುಕ್ತ ಆಮಂತ್ರಣ ಪತ್ರಿಕೆ‌ ಬಿಡುಗಡೆ ಕಾರ್ಯಕ್ರಮ ವು ಜ.24ರಂದು ನಡೆಯಿತು.

ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗೌರವಾಧ್ಯಕ್ಷ ಕುಶಾಲಪ್ಪ ಮಾಸ್ತರ್ ರುದ್ರಚಾಮುಂಡಿ, ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಗೌಡ ಚಿತ್ತಡ್ಕ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿ ಎಸ್., ಹಿರಿಯ ವಿದ್ಯಾರ್ಥಿ ಸಂಘಧ ಅಧ್ಯಕ್ಷ ರಾಕೇಶ್ ರಾಜ್ ಹಿರಿಯಡ್ಕ, ಎಸ್‌.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಕಂದ್ರಪ್ಪಾಡಿ, ಹಾಗೂ ಪ್ರಮುಖರಾದ ದಿವಾಕರ ಮುಂಡೋಡಿ, ವಿಜೇಶ್ ಹಿರಿಯಡ್ಕ, ಪ್ರೀತಂ ಮುಂಡೋಡಿ, ನಾಗೇಶ್ ಮುಂಡೋಡಿ, ಅಶ್ವಿತ್ ಪರಮಲೆ ಜಯರಾಮ ಕಡ್ಲಾರು, ವೀಣಾ ಎಂ., ಜಯಪ್ರಕಾಶ್ ಕಡ್ಲಾರು, ಕಿಶೋರ್ ಕುಮಾರ್ ಅಂಬೆಕಲ್ಲು, ಯಶೋಧ ಬಾಳೆಗುಡ್ಡೆ, ಕರುಣಾಕರ ದೇವರಗುಂಡ, ವೇಣುಕುಮಾರ್ ಚಿತ್ತಡ್ಕ, ಪುರುಷೋತ್ತಮ ಮುಂಡೋಡಿ‌, ಪ್ರಕಾಶ್ ಮುಂಡೋಡಿ ಶಿಕ್ಷಕರಾದ ಅಜಯ್, ಪಲ್ಲವಿ, ಆಶಾರಾಣಿ ಉಪಸ್ಥಿತರಿದ್ದರು.