ರಾಜ್ಯ ಮಟ್ಟದ ಫ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಸುಳ್ಯ ಪೀಸ್ ಸ್ಕೂಲ್ ವಿದ್ಯಾರ್ಥಿಗಳಿಗೆ ಚಿನ್ನ ಮತ್ತು ಬೆಳ್ಳಿ ಪದಕ

0

ಚಿಕ್ಕಮಗಳೂರಿನ ಇನ್ ಫ್ಯಾಂಟ್ ಜೀಸಸ್ ಶಾಲೆಯಲ್ಲಿ ಜನವರಿ 20 21ರಂದು ನಡೆದ ರಾಜ್ಯಮಟ್ಟದ ಫ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಸುಳ್ಯದ ಪೀಸ್ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿ ವಿಶೇಷ ಸಾಧನೆ ಮಾಡಿ ಎರಡು ಚಿನ್ನದ ಪದಕ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ತನ್ನದಾಗಿಸಿಕೊಂಡಿರುತ್ತಾರೆ.

ಫಾತಿಮಾ ನಸ್ರೀನ್ (ಆರನೇ ತರಗತಿ) ಹಾಗೂ ಮುಹಮ್ಮದ್ ಹಯಾನ್ (ಐದನೇ ತರಗತಿ) ಚಿನ್ನದ ಪದಕ ಗೆದ್ದರೆ, ಮರಿಯಮ್ ನೂಹಾ (ಆರನೇ ತರಗತಿ) ಬೆಳ್ಳಿ ಪದಕ ಜಯಿಸಿರುತ್ತಾರೆ. ಸೋಹಾ ಫಾತಿಮಾ (ಐದನೇ ತರಗತಿ), ಝಯಾನ್ ಅಹ್ಮದ್ (ಐದನೇ ತರಗತಿ) ಮತ್ತು ಇಹ್ಸಾನ್ ಅಹ್ಮದ್(ಐದನೇ ತರಗತಿ) ಕಂಚಿನ ಪದಕ ವಿಜೇತರು.

ಚಿಕ್ಕಮಗಳೂರು ಜಿಲ್ಲಾ ಟೇಕ್ವಾಂಡೋ ಅಸೋಸಿಯೇಶನ್ ಹಾಗೂ ವಿವೇಕಾನಂದ ಫಿಟ್ ನೆಸ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಲ್ಪಟ್ಟ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಚಾಲಕರು, ಸದಸ್ಯರು, ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ. ಉಪ್ಪಿನಂಗಡಿ ಮೂಲದ ಶಿಹಾಬ್ ಟಿ ಕರಾಟೆಪಟುಗಳಿಗೆ ತರಬೇತಿ ನೀಡಿರುತ್ತಾರೆ.