ಅರಂಬೂರು : ಅತೀ ವೇಗದಲ್ಲಿ ಬಂದ ಕಾರು ಬೈಕ್‌ಗೆ ಡಿಕ್ಕಿ, ಜಖಂ

0

ಅತೀ ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಜಖಂಗೊಂಡ ಘಟನೆ ಅರಂಬೂರು ಬಳಿ ಇದೀಗ ಸಂಭವಿಸಿದೆ.

ಕೊಡಗು ಸಂಪಾಜೆಯ ಪುರುಷೋತ್ತಮ ಎಂಬವರು ತಮ್ಮ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮುಂಭಾಗದಿಂದ ಅತೀ ವೇಗದಲ್ಲಿ ಬಂದ ಕಾರು ಪಲ್ಟಿ ಹೊಡೆದು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಜಖಂಗೊಂಡಿದ್ದು, ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತರಲಾಯಿತು. ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.