ಗುತ್ತಿಗಾರು: ಗುತ್ತಿಗಾರು ಪ್ರಾ.ಕೃ.ಪ. ಸ‌. ಸಂಘದಿಂದ ಅಟೋ ನಿಲ್ದಾಣಕ್ಕೆ ಕೊಡುಗೆ

0

ಗುತ್ತಿಗಾರು ಬಸ್‌ ನಿಲ್ದಾಣದ ಎದುರಿನಲ್ಲಿ ನಲ್ಲಿರುವ ಅಟೋ ನಿಲ್ದಾಣಕ್ಕೆ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅನುದಾನದಿಂದ ಆಟೋ ರಿಕ್ಷಾ ನಿಲ್ದಾಣದ ಖರ್ಚಿನ ಕೊಡುಗೆಯಾಗಿ ಕೊಡಲಾಗಿದ್ದು ಅದನ್ನು ಜ.26 ಗಣರಾಜ್ಯೋತ್ಸವದ ಸುಸಂದರ್ಭದಲ್ಲಿ ಉದ್ಘಾಟನೆ ಮಾಡಲಾಯಿತು.

ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಘದ ಹಾಲಿ ನಿರ್ಧೆಶಕರಾದ ಬಿ.ಕೆ.ಬೆಳ್ಯಪ್ಪ ಗೌಡ ಕಡ್ತಲಕಜೆ ದೀಪ ಬೆಳಗಿಸಿದರು. ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಶರತ್.ಎ., ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷರಾದ ಕಿಶೋರ್ ಕುಮಾರ್‌ ಅಂಬೆಕಲ್ಲು, ನಿರ್ದೇಶಕರುಗಳಾದ ಮುಳಿಯ ಕೇಶವ ಭಟ್, ನವೀನ್ ಬಾಳುಗೋಡು, ರವಿಪ್ರಕಾಶ್ ಬಳ್ಳಡ್ಕ, ಕುಂಞ ಬಳ್ಳಕ್ಕ, ಗ್ರಾ.ಪಂ ಸದಸ್ಯರಾದ ವೆಂಕಟ್ ವಳಲಂಬೆ, ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ವಿಶ್ವನಾಥ ಚತ್ರಪ್ಪಾಡಿ, ಗೌರವ ಅಧ್ಯಕ್ಷರಾದ ಮೋಹನ ಮುಕ್ಕೂರು, ಚಾಲಕರಾದ ಕೃಷ್ಣ ಗೌಡ ಪೈಕ, ಸತ್ಯನಾರಾಯಣ ಬಾಕಿಲ, ಲೋಕೇಶ್‌ ಪೈಕ, ಪ್ರದೀಪ್ ವಳಲಂಬೆ, ಸಹಕಾರಿ ಸಂಘದ ಸಿಬ್ಬಂದಿಗಳು, ಉಪಸ್ಥಿತರಿದ್ದರು. ಯಂ ಎಸ್ ಘಟಕದ ಅಧ್ಯಕ್ಷರಾದ ವಿಶ್ವನಾಥ ಚತ್ರಪ್ಪಾಡಿ ಸ್ವಾಗತಿಸಿ, ವಂದಿಸಿದರು.