
ಪಂಜ ಸೀಮೆ ದೇವಳವಾದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಜ.26 ರಂದು ಮುಂಜಾನೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂತ್ಕುಂಜ ಒಕ್ಕೂಟ ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕ ಪಂಜ ವಲಯ ಹಾಗೂ ಶ್ರೀ ಕಾಚುಕುಜುಂಬ, ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಪಂಬೆತ್ತಾಡಿ ಗ್ರಾಮಸ್ಥರಿಂದ ಹಾಗೂ ಸೀಮೆ ಭಕ್ತರಿಂದ ಶ್ರಮದಾನ ಸೇವೆಯು ಭರದಿಂದ ಸಾಗುತ್ತಿದೆ .






ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಉತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದಾರೆ. ಜ.28 ರಂದು ಕೂಡ ಸಾಮೂಹಿಕ ಶ್ರಮದಾನ ಜರುಗಲಿದೆ.


















