p>

ಮೇನಾಲ ಶಾಲಾ ಕೊಠಡಿ ಉದ್ಘಾಟನೆಯನ್ನು ಮಾತ್ರ ಪೆಂಡಿಂಗ್ ಇರಿಸಲು ಹೇಳಿದ್ದೆ. ಮಕ್ಕಳು ಅತ್ತರೆಂದು ತಿಳಿದು ನನಗೆ ತೀವ್ರ ನೋವಾಗಿದೆ : ಭಾಗೀರಥಿ ಮುರುಳ್ಯ

0

ಅಜ್ಜಾವರ ಗ್ರಾಮದ ಮೇನಾಲ ಶಾಲಾ ನೂತನ ಕೊಠಡಿ ಉದ್ಘಾಟನೆಯನ್ನು ಮಾತ್ರ ಮುಂದುವರಿಸಲು ಹೇಳಿ, ಉಳಿದ ಕಾರ್ಯಕ್ರಮ ಮಾಡುವಂತೆ ನಾನು ತಿಳಿಸಿದ್ದೆ. ಕಾರ್ಯಕ್ರಮ ಮುಂದೂಡಿದ್ದರಿಂದ ಮಕ್ಕಳು ಅತ್ತರೆಂದು ತಿಳಿದು ನನಗೆ ತೀವ್ರ ನೋವಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.

ಮೇನಾಲ ಶಾಲಾ ಕಟ್ಟಡ ಉದ್ಘಾಟನೆ ಮುಂದೂಡಿರುವ ಕುರಿತು ಶಾಸಕರನ್ನು ಸುದ್ದಿ ಸಂಪರ್ಕಿಸಿ ವಿಚಾರಿಸಿದಾಗ, ಶಾಲಾ ಕೊಠಡಿ ಉದ್ಘಾಟನೆಗೆ ನಾನು ಹೋಗಬೇಕಿತ್ತು. ಅನಿವಾರ್ಯ ವಾಗಿ ಹೋಗಲು ಆಗುವುದಿಲ್ಲ ಎಂದು ತಿಳಿದು ಕೊಠಡಿ ಉದ್ಘಾಟನೆ ‌ಮುಂದೂಡಿ ಉಳಿದ ಕಾರ್ಯಕ್ರಮ ನಡೆಸುವಂತೆ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದೆ. ಶಾಲೆಗೆ ಹೋಗಲು ಇದೊಂದು ಸಂದರ್ಭ ಆದ್ದರಿಂದ ಬಂದು ಉದ್ಘಾಟಿಸುವುದಾಗಿ ತಿಳಿಸಿದೆ. ಪ್ರತಿಭಾ ಪುರಸ್ಕಾರ – ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಹೇಳಿದ್ದೆ. ನಾನು ಒಬ್ಬಳು ಶಿಕ್ಷಕಿಯಾಗಿದ್ದವಳು. ಇದೀಗ ಮಕ್ಕಳು ಅತ್ತರೆಂದು ತಿಳಿದು ನನಗೆ ನೋವಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.