ಅಜ್ಜಾವರ :ಎಬಿ ರೆಸ್ಸಿಡೆನ್ಸಿ ಬಿ ಬ್ಲಾಕ್ ಉದ್ಘಾಟನೆ

0

ಎಬಿ ಎಂಟರ್ಪ್ರೈಸಸ್ ನವರ ನೂತನ ನಿರ್ಮಿಸಿದ ಎಬಿ ರೆಸ್ಸಿಡೆನ್ಸಿ ಬಿ ಬ್ಲಾಕ್ ಅಜ್ಜಾವರ ಅಡ್ಕದಲ್ಲಿ ಉದ್ಘಾಟನೆ ಗೊಂಡಿತು.ಇದರ ಉದ್ಘಾಟನೆಯನ್ನು ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಕಾಂದಪುರಂ ಎ.ಪಿ ಅಬೂಭಕ್ಕರ್ ಮುಸ್ಲಿಯಾರ್ ಉದ್ಘಾಟಿಸಿದರು.ಕಟ್ಟಡ ಉದ್ಘಾಟನೆ ಸಮಾರಂಭ ಪ್ರಯುಕ್ತ ಏರ್ಪಡಿಸಿದ್ದ ಮೌಲೂದ್ ಕಾರ್ಯಕ್ರಮವನ್ನು ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ಎಣ್ಮೂರ್ ಉದ್ಘಾಟಿಸಿ ದುವಾಶಿರ್ವಚನ ಮಾಡಿದರು.

ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಅಧ್ಯಕ್ಷ ಹಾಫಿಳ್ ಶೂಫಿಯಾನ್ ಸಖಾಫಿ ಈ ಸಂದರ್ಭದಲ್ಲಿ ಶುಭ ಹಾರೈಸಿದರು.ಮಾಪಳಡ್ಕ ದರ್ಗಾ ಶರೀಫ್ ಮಸೀದಿ ಖತೀಬರಾದ ಹಾಫೀಳ್ ಅಬ್ದುಸಲಾಂ ನಿಝಾಮಿ ಚೆನ್ನಾರ್ ,ಇರುವಂಬಳ್ಳ ಮಸೀದಿ ಖತೀಬರಾದ ಅಶ್ರಫ್ ನಹಿಮಿ,ಹಸೈನಾರ್ ಹಾಜಿ ಗೊರಡ್ಕ ಅಬುದಾಬಿ ಕೆಸಿಎಫ್ ನ ಹಕೀಂ ತುರ್ಕಳಿಕೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಎಬಿ ರೆಸ್ಸಿಡೆನ್ಸಿ ಮಾಲಕ ಎಬಿ ಅಶ್ರಫ್ ಸಹದಿ ಮತ್ತು ಅವರ ಸಹೋದರ ಹಸೈನಾರ್ ಅಮಾನಿ ಸರ್ವರನ್ನೂ ಸ್ವಾಗತಿಸಿ ಆಗಮಿಸಿದವರಿಗೆ ತಬರೂಕ್ ವಿತರಿಸಿದರು.