ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್ ಸುಳ್ಯ ಅಲ್ಪಸಂಖ್ಯಾತ ಸೊಸೈಟಿ ಗೆ ಭೇಟಿ

0

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜಿಮ್ ರವರು ಸುಳ್ಯ ಅಲ್ಪಸಂಖ್ಯಾತ ಸೊಸೈಟಿಗೆ ಭೇಟಿ ಸೊಸೈಟಿ ಕಾರ್ಯವೈಖರಿ ಬಗ್ಗೆ ಮಾತುಕತೆ ನಡೆಸಿದರು.ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆಯವರು ರಾಜ್ಯ ಅಲ್ಪಸಂಖ್ಯಾತ ಅಯೋಗದ ಅಧ್ಯಕ್ಷರನ್ನು ಗೌರವಿಸಿ ಸನ್ಮಾನಿಸಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷರು ಅಲ್ಪಸಂಖ್ಯಾತ ಸೊಸೈಟಿ ಮಾಜಿ ಅಧ್ಯಕ್ಷರಾದ ಟಿ. ಎಂ ಶಾಹಿದ್ ತೆಕ್ಕಿಲ್ ,ಸೊಸೈಟಿ ಉಪಾಧ್ಯಕ್ಷ ಹಾಜಿ ಮೊಯ್ದೀನ್ ಪ್ಯಾನ್ಸಿ,ಜಿಲ್ಲಾ ವಕ್ಪ್ ಅಧಿಕಾರಿ ಅಬೂಭಕ್ಕರ್, ಸುಳ್ಯ ತಾ.ಪಂ ನಿವೃತ್ತ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಮುಜಿಬುಲ್ಲಾ ಜಪಾರಿ,ಸೊಸೈಟಿ ನಿರ್ದೇಶಕರಾದ ಹಸೈನಾರ್ ಕಲ್ಲುಗುಂಡಿ,ಅಮೀನ ಇಬ್ರಾಹಿಂ, ಬಾಪೂ ಸಾಹೇಬ್,ಹಮೀದ್ ಅಲ್ಪಾ ,ನ.ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್,ಸೊಸೈಟಿ ಮುಖ್ಯ ವ್ಯವಸ್ಥಾಪಕ ಪ್ರಜ್ವಲ್ ಹಾಗೂ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.