ಫೆ.13 ರಿಂದ 19; ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ

0


ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಳದಲ್ಲಿ ಪೂರ್ವಾಶಿಷ್ಟ ಸಂಪ್ರದಾಯ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಐದು ದಿವಸಗಳ ಉತ್ಸವಾದಿಗಳು ಫೆ.13 ರಿಂದ 19ರವರೆಗೆ ನಡೆಯಲಿದೆ.


ಫೆ.13 ರಾತ್ರಿ ಧ್ವಜಾರೋಹಣ,ಶ್ರೀರಂಗ ಪೂಜೆ, ಬಲಿ ಹೊರಟು ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಫೆ. 14ರಂದು ರಾತ್ರಿ ಬಲಿ ಹೊರಟು ಉತ್ಸವ, ಮತ್ತು ತರವಾಡು ಮಾಲೆಂಗ್ರಿ ಪಿಲಿಕುಂಜ ಸ್ಥಾನದಿಂದ ಶ್ರೀ ಮಹಾಲಿಂಗರಾಯ ದೈವದ ಭಂಡಾರ ಬಂದು ಓಲೆಸವಾರಿ, ಹೊಸ ಮಜಲು ಕಟ್ಟೆಪೂಜೆ, ಮಹಾಪೂಜೆ, ಪ್ರಸಾದ ವಿತರಣೆ.ರಾತ್ರಿ ಶ್ರೀ ನೇಲ್ಯಾರು ನೇಮ ಮತ್ತು ಉಳ್ಳಾಲ್ತಿ ನೇಮ. ಫೆ. 15ರಂದು ಬೆಳಿಗ್ಗೆ ಬಲಿ ಹೊರಟು ಉತ್ಸವ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ,ಮಹಾಪೂಜೆ,ಪ್ರಸಾದ ವಿತರಣೆ, ಅನ್ನ ಸಂತರ್ಪಣೆ. ರಾತ್ರಿ ವಸಂತಕಟ್ಟೆಯಲ್ಲಿ ಪೂಜೆ. ಫೆ. 16 ಬೆಳಗ್ಗೆ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಬಲಿ ಹೊರಟು ದೇವರ ಉತ್ಸವ ಬಲಿಯೊಂದಿಗೆ ಕೋಲಾಟ, ಮಹಾ ರಥೋತ್ಸವ, ಪಾಟಾಳಿ ಕಟ್ಟೆ ಪೂಜೆ ಮತ್ತು ಮರೋಳಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಉದ್ರಾಂಡಿ ದೈವಗಳ ಓಲೆ ಸವಾರಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಟ್ಟೆಪೂಜೆ ನಂತರ ಮಹಾಪೂಜೆ, ಪ್ರಸಾದ ವಿತರಣೆ,ಶ್ರೀ ಭೂತ ಬಲಿ ಮತ್ತು ಶ್ರೀದೇವರ ಶಯನೋತ್ಸವ.

ಫೆ.17ರಂದು ಬೆಳಿಗ್ಗೆ ಕವಾಟೋದ್ಘಾಟನೆ, ತೈಲಾಭಿಷೇಕ ಪಂಚಾಮೃತಾಭಿಷೇಕ, ಅಪರಾಹ್ನ ಶ್ರೀ ಎಲ್ಯಾರು ದೈವಗಳ ನೇಮ, ಮಿತ್ತೂರು ನಾಯರ್ ದೈವಗಳ ನೇಮ, ರಾತ್ರಿ ಬಲಿ ಹೊರಟು ಕಟ್ಟೆ ಪೂಜೆ, ನಂತರ ನೂಚಿಲ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಕಟ್ಟೆಪೂಜೆ ಹಾಗೂ ಕುಮಾರಧಾರ ಭಂಡಾರ ಗಯದಲ್ಲಿ ಅವಭೃತ ಸ್ನಾನ ಧ್ವಜಾವರೋಹಣ. ಫೆ.18 ಬೆಳಿಗ್ಗೆ ಗಣಪತಿ ಹವನ, ಕಳಶ ಪೂಜೆ ರುದ್ರಾಭಿಷೇಕ ,ಕಳಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ. ಫೆ.19ರಂದು ಬೆಳಿಗ್ಗೆ ಮರೋಳಿ ಶಿರಾಡಿ ರಾಜನ್ ದೈವದ ಭಂಡಾರ ಬಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪೂಜೆ.


ಫೆ‌.14 ರಂದು ಹಸಿರು ಕಾಣಿಕೆ ಶೋಭಾಯಾತ್ರೆ ನಡೆಯಲಿದೆ. ಫೆ.16 ರಂದು ರಾತ್ರಿ ಲಕ್ಷ್ಮಣ ಆಚಾರ್ಯ ಮತ್ತು ಬಳಗದವರಿಂದ ಕೀಲುಕುದುರೆ ಮತ್ತು ಗೊಂಬೆಯಾಟ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರ‌ಮ; ಜಾತ್ರೋತ್ಸವದ ಅಂಗವಾಗಿ ಶಿವಪಾರ್ವತಿ ಸಭಾಭವನದಲ್ಲಿ ಸಂಜೆ ಗಂಟೆ 6.00 ರಿಂದ
ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.


ಫೆ.13 ರಂದು ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ
ಫೆ. 14‌‌ರಂದು‌ ರಾತ್ರಿ ಗಂಟೆ 8.00ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ನಾಕೂರು ಮತ್ತು ಜಿಲ್ಲಾ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ನಾಗರ ಪಂಚಮಿ ನಡೆಯಲಿದೆ.


ಫೆ.15ರಂದು ಸಂಜೆ 7 ರಿಂದ ಕಲಾ ಸಂಗಮ ಕಲಾವಿದರಿಂದ ವಿಜಯ ಕುಮಾರ ಕೋಡಿಯಾಲ್ ಬೈಲ್ ನಿರ್ದೇಶನದಲ್ಲಿ ವಿಭಿನ್ನ ಶೈಲಿಯ
ತುಳು ನಾಟಕ ಶಿವದೂತೆ ಗುಳಿಗೆ ನಡೆಯಲಿದೆ.
ಫೆ‌.16 ರಂದು ಸಂಜೆ ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಫೆ.18 ರಂದು ಬೆಳಿಗ್ಗೆ ಗಂಟೆ 9-00ರಿಂದ ಊರ ಮತ್ತು ಪರವೂರ ಭಜನಾ ತಂಡದಿಂದ ಕುಣಿತ ಭಜನೆ ನಡೆಯಲಿದೆ.