ಪಂಜ ಲಯನ್ಸ್ ಕ್ಲಬ್ ವತಿಯಿಂದ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆ

0

ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಪಂಜ ಪರಿಸರದ ಪಲ್ಲೋಡಿ ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಕಡುಬಡತನದಲ್ಲಿರುವ ನಿವಾಸಿಗಳಿಗೆ ಕ್ಲಬ್ ವತಿಯಿಂದ ಅಕ್ಕಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಉಳ್ಳಾಕುಲು ಕಲಾ ರಂಗಾ, {ರಿ } ಪಲ್ಲೋಡಿ ಇದರ ಪ್ರಾಯೋಜಕತ್ವದಲ್ಲಿ ಅಧ್ಯಕ್ಷ ಬಾಲಕೃಷ್ಣ ಗೌಡ ಪೂರ್ವ ಅಧ್ಯಕ್ಷ ಪ್ರಕಾಶ್ ಜಾಕೆ ಅತಿಥಿಗಳಾಗಿ ಉಪಸ್ಥಿತರಿದ್ದು ಅಕ್ಕಿಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.ಲಯನ್ಸ್ ಕ್ಲಬ್ ಅಧ್ಯಕ್ಷ ಲl ದಿಲೀಪ್ ಬಾಬ್ಲು ಬೆಟ್ಟು ಲl ವಾಸುದೇವ ಮೇಲ್ಪಾಡಿ, ಕೋಶಾಧ್ಯಕ್ಷ ಆನಂದ ಗೌಡ, ಹಾಗೂ ಸದಸ್ಯರಾಗಿರುವ ಲ ಕೇಶವ ಗೌಡ ಉಪಸ್ಥಿತರಿದ್ದರು.