ಆಲೆಟ್ಟಿ ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದಲ್ಲಿ ಭಜನಾ ಕಾರ್ಯಕ್ರಮ- ಇಂದು ನಾಳೆ ನೇಮೋತ್ಸವ

0

ಆಲೆಟ್ಟಿ ಗುಂಡ್ಯ ಮಾಡಾರಮನೆ ಶ್ರೀ ಉಳ್ಳಾಕುಲು ಸಪರಿವಾರ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಪ್ರಯುಕ್ತ ಫೆ.2 ರಂದು ಆಲೆಟ್ಟಿ ಶ್ರೀ ಸದಾಶಿವ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸಂಜೆ ದೈವಸ್ಥಾನದ ನಡೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಪ್ರಭು ರವರು ಪ್ರಾರ್ಥಿಸಿ ಭಜನಾ ಸಂಕೀರ್ತನೆಯು ಆರಂಭಗೊಂಡಿತು.
ಇಂದು ತಂತ್ರಗಳ ಆಗಮನವಾಗಿ ವೈದಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಶ್ರೀ ಉಳ್ಳಾಕುಲು ದೈವದ ಕಿರಿಯರ ಹಾಗೂ ಹಿರಿಯರ ವಾಲಸಿರಿ ನೇಮೋತ್ಸವ ನಡೆಯಲಿದೆ. ನಾಳೆ ಬೆಳಗ್ಗೆ ಸಪರಿವಾರ ದೈವಗಳ ನೇಮೋತ್ಸವವು ನಡೆಯಲಿರುವುದು. ಸದ್ರಿ ದಿನಗಳಲ್ಲಿ ನಿರಂತರ ಅನ್ನ ಸಂತರ್ಪಣೆಯಾಗಲಿರುವುದು.