ರಾಷ್ಟ್ರ ಮಟ್ಟದ ಯೋಗಾಸನ ಅಕ್ಷಯ ಬಾಬ್ಲುಬೆಟ್ಟು ತೃತೀಯ ಸ್ಥಾನ

0

ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ಆನ್ಲೈನ್ ಮೂಲಕ ನಡೆಸಿದ 15ನೇ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ -2024ರಲ್ಲಿ 12 ವರ್ಷದ ಒಳಗಿನ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅಕ್ಷಯ ಬಾಬ್ಲುಬೆಟ್ಟು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ನಿರಂತರ ಯೋಗ ಕೇಂದ್ರ ಏನೇಕಲ್ಲು ಇದರ ವಿದ್ಯಾರ್ಥಿನಿಯಾಗಿರುವ ಇವರು ಯೇನೆಕಲ್ಲು ಸ.ಹಿ.ಪ್ರಾ. ಶಾಲೆಯ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೋಹನ್ ಮತ್ತು ಶ್ರೀಮತಿ ದಿವ್ಯ ದಂಪತಿಯ ಪುತ್ರಿಯಾಗಿರುವ ಇವರು ನಿರಂತರ ಯೋಗ ಕೇಂದ್ರದ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕರವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.