ಗೂನಡ್ಕದ ಪೆಲ್ತಡ್ಕ ಬಳಿ ಟ್ಯಾಂಕರ್ ಹಾಗೂ ಕಾರು ಡಿಕ್ಕಿ, ಕಾರು ಜಖಂ

0

ಸಂಪಾಜೆ ಗ್ರಾಮದ ಗೂನಡ್ಕದ ಪೆಲ್ತಡ್ಕ ಬಳಿ ಟ್ಯಾಂಕರ್ ಹಾಗೂ ಕಾರು ಡಿಕ್ಕಿ, ಕಾರು ಜಖಂಗೊಂಡ ಘಟನೆ ಇಂದು ಸಂಭವಿಸಿದೆ.


ಮಂಗಳೂರಿನಿಂದ ಕುಶಾಲನಗರಕ್ಕೆ ಹೋಗುತ್ತಿದ್ದ ಟ್ಯಾಂಕರ್ ಹಾಗೂ ಮಡಿಕೇರಿಯಿಂದ ಕಾಸರಗೋಡು ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಕಾರು ಪರಸ್ಪರ ಡಿಕ್ಕಿ ಹೊಡೆಯಿತು. ಗುದ್ದಿದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.