ಫೆ. 11ರಂದು ಜೇಸಿಐ ಪಂಜ ಪಂಚಶ್ರೀ ವತಿಯಿಂದ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಕಾರ್ಯಕ್ರಮ

0

ಜೇಸಿಐ ಪಂಜ ಪಂಚಶ್ರೀ,ಪಶುಸಂಗೋಪನಾ ಇಲಾಖೆ ಸುಳ್ಯ ಇವರ ಜಂಟಿ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಕಾರ್ಯಕ್ರಮವು ಈ ಬಾರಿ ಫೆ.11ರಂದು ನಡೆಯಲಿರುವುದಾಗಿ ಘಟಕದ ಅಧ್ಯಕ್ಷ ಜೀವನ್ ಮಲ್ಕಜೆ ತಿಳಿಸಿದ್ದಾರೆ.

ಸುಳ್ಯ ಹಾಗೂ ಕಡಬ ತಾಲೂಕಿಗೆ ಒಳಪಟ್ಟ 6 ಗ್ರಾಮ ಪಂಚಾಯತ್ ಗಳಾದ ಪಂಜ, ಕಲ್ಮಡ್ಕ, ಮುರುಳ್ಯ, ಎಡಮಂಗಲ, ಬಳ್ಪ, ಗುತ್ತಿಗಾರು ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಪಶವೈದ್ಯಾಧಿಕಾರಿಗಳನ್ನೊಳ ಗೊಂಡ ತಂಡಗಳು ಏಕಕಾಲದಲ್ಲಿ ಸಂಚರಿಸಿ ಸುಮಾರು 1000 ಮಿಕ್ಕಿ ಸಾಕು ನಾಯಿಗಳಿಗೆ ಹುಚ್ಚುನಾಯಿ ರೋಗ ನಿರೋಧಕ ಲಸಿಕೆಯನ್ನು ಹಾಕುವ ರಾಜ್ಯದಲ್ಲಿ ದಾಖಲೆಯ ಕಾರ್ಯಕ್ರಮ ಇದಾಗಿದೆ.

22ನೇ ವರ್ಷದ ಕಾರ್ಯಕ್ರಮ ಭಯಾನಕ ರೇಬೀಸ್ ರೋಗವನ್ನು ಕ್ರಮಬದ್ಧವಾಗಿ ನಿರ್ಮೂಲನೆ ಮಾಡಲು ಜೇಸಿಐ ಪಂಜ ಪಂಚಶ್ರಿ 2003 ರಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಿತ್ತು. ಸತತ 21ವರ್ಷ ಯಶಸ್ವಿಯಾಗಿ ಪೂರೈಸಿ .
ಈ ಬಾರಿ 22ನೇ ವರ್ಷದ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಳಕಳಿಯೊಂದಿಗೆ ಕಾರ್ಯಾಚರಿಸುತ್ತಿರುವ ಜೇಸಿಐ ಪಂಜ ಪಂಚಶ್ರೀ ಬೆಳ್ಳಿಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿತು.