ನಾಲ್ಕೂರು : ಉಳ್ಳಾಕುಲು ಕುಮಾರ ದೈವಗಳ ನೇಮೋತ್ಸವ

0

ಗ್ರಾಮದ ಗ್ರಾಮದ ಚಿಲ್ತಡ್ಕ ಶ್ರೀ ಉಳ್ಳಾಕುಲು ಕುಮಾರ ಸಹ ಪರಿವಾರ ದೈವಗಳ ನೇಮೋತ್ಸವ ನಡೆಯಿತು. ಪ್ರಾತಃಕಾಲದಲ್ಲಿ ಶ್ರೀ ಉಳ್ಳಾಕುಲು ಕುಮಾರ ದೈವದ ನೇಮ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯರಾಮ ಗೌಡ ಚಿಲ್ತಡ್ಕ ಹಾಗೂ ಇತರ ಸದಸ್ಯರುಗಳು ಮತ್ತು ನೇಮೋತ್ಸವ ಸಮಿತಿಯ ಅಧ್ಯಕ್ಷರಾದ ದಿನೇಶ್ ಹಾಲೆಮಜಲು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಉಪಸಿತರಿದ್ದು ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು.

ಜ. 29ರಂದು ಗಣ ಹೋಮ ಮತ್ತು ಗೊನೆ ಮುಹೂರ್ತ, ಫೆಬ್ರವರಿ 7ರಂದು ರಾತ್ರಿ ಚಿಲ್ತಡ್ಕ ಉಳ್ಳಾಕುಲು ಚಾವಡಿಯಿಂದ ಚಿಲ್ತಡ್ಕದ ಪನಿವಾರಾಡ್ಕ ಮಾಡಕ್ಕೆ ಬಂಡಾರ ತಂದು, ಫೆಬ್ರವರಿ 8ರಂದು ಉಳ್ಳಾಕುಲು ಮತ್ತು ಕುಮಾರ ದೈವದ ನೇಮ, ಪುರುಷ ದೈವದ ನೇಮ, ಶ್ರೀ ಮಲೆ ಚಾಮುಂಡಿ ಮತ್ತು ಉಪದೈವಗಳ ನೇಮ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ನಂತರ ಅಜ್ಜಿ ದೈವದ ನೇಮ, ರಾತ್ರಿ ಗುಳಿಗ ದೈವದ ನೇಮ ಅನ್ನ ಸಂತರ್ಪಣೆ ನಡೆಯಲಿರುವುದು.