p>

ಕುಕ್ಕೆಶ್ರೀ ಅಟೋಚಾಲಕ ಮಾಲಕ ಸಂಘ ಸುಬ್ರಹ್ಮಣ್ಯ ಇದರ ವಾರ್ಷಿಕೋತ್ಸವ

0

ಕುಕ್ಕೆಶ್ರೀ ಅಟೋಚಾಲಕ ಮಾಲಕ ಸಂಘದ 13ನೇ ವರ್ಷದ ವಾರ್ಷಿಕೋತ್ಸವ ಫೆ.7 ರಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.

ಕುಕ್ಕೆಶ್ರೀ ಅಟೋ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಉಮೇಶ್ ಕೆ.ಎನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಎಸ್ ಸುಳ್ಳಿ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್, ಸಂಘದ ಕಾನೂನು ಸಲಹೆಗಾರ ಎಂ.ವೆಂಕಪ್ಪ ಗೌಡ, ನಿಕಟಪೂರ್ವ ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಬಿಎಂಎಸ್ ಅಟೋ ಚಾಲಕ ಸಂಘದ ಅಧ್ಯಕ್ಷ ದಿನೇಶ್ ಶಿರಾಡಿ ಮುಖ್ಯಅತಿಥಿಗಳಾಗಿದ್ದರು.ಸಂಘದ 13ನೇ ಅಧ್ಯಕ್ಷ ವಿವೇಕಾನಂದ ದೇವರಗದ್ದೆ, ಕಾರ್ಯದರ್ಶಿ ರೋಹಿತ್ ಮಲೆಯಾಳ ವೇದಿಕೆಯಲ್ಲಿದ್ದರು.


ಸಾಧಕರಿಗೆ ಸನ್ಮಾನ:
ನಿವೃತ್ತ ಯೋಧ ಪ್ರಭಾಕರ ಮೆರೊಂಜಿ, ನಿವೃತ್ತ ಆನೆ ಮಾವುತ ಶ್ರೀನಿವಾಸ ಗೌಡ ಧರ್ಮಸ್ಥಳ, ಕುಕ್ಕೆ ದೇವಳದ ಭದ್ರತಾ ಸಿಬ್ಬಂದಿ ಪುರುಷೋತ್ತಮ ಕೋಡ್ತುಗುಳಿ ಅವರನ್ನು ಸನ್ಮಾನಿಸಲಾಯಿತು.ಯೋಗಾಸನದಲ್ಲಿ ವಿಶ್ವದಾಖಲೆ ಮಾಡಿದ ಗೌರಿತಾ ಕೆ.ಜಿ, ರಾಷ್ಟೀಯ ಶಟ್ಲ್ ಬ್ಯಾಡ್‌ಮಿಂಟನ್ ಆಟಗಾರರಾದ ಪ್ರಾರ್ಥನ್ ಎಸ್.ಜಿ, ಕೌಶಿಕ್ ಕಕ್ಕೆಪದವು, ರಾಜ್ಯ ಮಟ್ಟದ ಶಟ್ಲ್ ಬ್ಯಾಡ್‌ಮಿಂಟನ್ ಆಟಗಾರರಾದ ಹೃದಯ್ ಕುಲ್ಕುಂದ ಮತ್ತು ಸೃಷ್ಠಿ ಮೇರ್ಕಜೆ ಕುಲ್ಕುಂದ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.


ಅಕ್ಷರ ನಿಧಿ ಅರ್ಪಣೆ:
ಸಂಘದ ಸದಸ್ಯರು ಸಮಾಜಮುಖಿ ಸೇವೆಗಾಗಿ ಆರಂಭಿಸಲ್ಪಟ್ಟ ಅಕ್ಷರಾ ನಿಧಿ ಯೋಜನೆಯಲ್ಲಿ ಡಿ.ಗಣೇಶ್ ದೇವರಗದ್ದೆ ಅವರಿಗೆ ರೂ.5000 ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.ಬಳಿಕ ಅಟೋ ಚಾಲಕರಿಗಾಗಿ ನಡೆಸಲಾದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಸ್ತಾಂತರಿಸಲಾಯಿತು.


ನಮ್ಯ.ಎನ್. ಶೆಟ್ಟಿ ಪ್ರಾರ್ಥನೆ ಹಾಡಿದರು. ಸಂಘಟನಾ ಕಾರ್ಯದರ್ಶಿ ಜಯಂತ್ ಕುಲ್ಕುಂದ ಸ್ವಾಗತಿಸಿದರು.ಸಂಘದ ನಿಕಟಪೂರ್ವಾಧ್ಯಕ್ಷ ನವೀನ್‌ಕುಮಾರ್ ಕೆ.ವಿ ಪ್ರಸ್ತಾಪಿಸಿದರು. ಸಂಘದ ಸದಸ್ಯರಾದ ಸತೀಶ್ ಕುಲ್ಕುಂದ,ಪ್ರಶಾಂತ್ ಮೂಜೂರ್, ಬಾಲಕೃಷ್ಣ.ಜೆ, ವಿಜ್ಞೇಶ್ ದೇವರಗದ್ದೆ, ಹೇಮಕರ ನೆಕ್ರಾಜೆ, ಶೇಷಕುಮಾರ್ ಶೆಟ್ಟಿ, ವಿನೋದ್ ರಾಜ್, ರಮಾಕಾಂತ್, ಸನ್ಮಾನ ಪತ್ರ ವಾಚಿಸಿದರು. ಪೂರ್ವ ಕಾರ್ಯದರ್ಶಿ ಉಮೇಶ್.ಜೆ ವಂದಿಸಿದರು. ರಾಜೇಶ್ ಎನ್.ಎಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ರತ್ನಾಕರ ಎಸ್, ಹರೀಶ್ ಅಗರಿಕಜೆ ಸಹಕರಿಸಿದರು. ಸಮಾರಂಭದ ಬಳಿಕ ನೃತ್ಯರಂಗ ಡ್ಯಾನ್ಸ್ ಅಕಾಡೆಮಿ ಹೊಸಬೆಟ್ಟು ಇವರಿಂದ ಉಪನ್ಯಾಸಕಿ ಪೂಜಾ ಪ್ರಭಾತ್ ನಿರ್ದೇಶನದಲ್ಲಿ ಡ್ಯಾನ್ಸ್ ಧಮಾಕಾ ಪ್ರದರ್ಶಿತವಾಯಿತು.ನಂತರ ಬಪ್ಪನಾಡು ಮೇಳದವರಿಂದ ಅಜ್ಜ ಅಜ್ಜ ಕೊರಗಜ್ಜ ಯಕ್ಷಗಾನ ನಡೆಯಿತು.