ಫೆ.13 : ಸುಳ್ಯ ಕಸಬಾ ಮೂಲೆ ಶ್ರೀ ಸಂಚಾರಿ ಗುಳಿಗ ಸಾನಿಧ್ಯ ದೈವದ ನೂತನ ಕಚೇರಿ ಉದ್ಘಾಟನೆ ಫೆ.17 ರಂದು ನೇಮೋತ್ಸವ

0

ಸುಳ್ಯ ಕಸಬಾ ಮೂಲೆ ಶ್ರೀ ಸಂಚಾರಿ ಗುಳಿಗ ಸಾನಿಧ್ಯ ದ ನೂತನ ಕಚೇರಿ ಉದ್ಘಾಟನೆಯು ಫೆ.13 ರಂದು ಬೆಳಿಗ್ಗೆ ನಡೆಯಲಿದೆ.
ಬೆಳಿಗ್ಗೆ ಗಂಟೆ 6.00 ಕ್ಕೆ ಗಣಹೋಮ,ಸಂಕ್ರಮಣ ಪೂಜೆ,ತಂಬಿಲ ಸೇವೆ ಹಾಗೂ ನೂತನ ಕಚೇರಿ ಉದ್ಘಾಟನೆ ನಡೆಯಲಿದೆ.
ಕಚೇರಿಯನ್ನು ಸಾರ್ವಜನಿಕ ಶ್ರೀ ಸಂಚಾರಿ ಗುಳಿಗ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷರಾದ ಸಂಕಪ್ಪ ಗೌಡ ನೀರ್ಪಾಡಿ ಮತ್ತು ಶ್ರೀಮತಿ ಭವಾನಿ ಸಂಕಪ್ಪ ಗೌಡ ರವರು ಉದ್ಘಾಟಿಸಲಿದ್ದಾರೆ.
ಬಳಿಕ ಲಘು ಉಪಾಹಾರ ನಡೆಯಲಿದೆ.
ಫೆ.17 ರಂದು ನೇಮೋತ್ಸವ
ಫೆ.17 ರಂದು ಬೆಳಿಗ್ಗೆ ಗಂಟೆ 6.00 ಕ್ಕೆ ಗಣಹೋಮ,ಸಂಜೆ ಗಂಟೆ 6.30 ಕ್ಕೆ ಭಂಡಾರ ತೆಗೆಯುವುದು.ಸಂಜೆ ಗಂಟೆ 7.00 ಕ್ಕೆ ಶ್ರೀ ದೈವಕ್ಕೆ ಎಣ್ಣೆ ವೀಳ್ಯ ನೀಡುವುದು ನಂತರ ಶ್ರೀ ದೈವದ ನೇಮೋತ್ಸವ ನಡೆಯಲಿದೆ.
ರಾತ್ರಿ ಗಂಟೆ 9.30 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು.