ಯೇನೆಕಲ್ಲು ರೈತ ಯುವಕ ಮಂಡಲ ಕಟ್ಟಡ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2,50,000 ಮೊತ್ತ ಮಂಜೂರು

0

ಯೇನೆಕಲ್ಲು ರೈತ ಯುವಕ ಮಂಡಲ ಕಟ್ಟಡ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 2,50,000 ಮೊತ್ತದ ಮoಜೂರಾತಿ ಪತ್ರ ನೀಡುವ ಕಾರ್ಯಕ್ರಮ ನಡೆಯಿತು .


ಸುಳ್ಯ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ನಾಗೇಶ್ ಪಿ ರವರು ಜನಜಾಗೃತಿ ವಲಯ ಅಧ್ಯಕ್ಷರು ಶಿವಪ್ರಸಾದ್ ಮಾದನಮನೆ, ವಲಯಧ್ಯಕ್ಷರು ಧರ್ಮಪಾಲ ಕಣ್ಕಲ್ ರವರ ಮೂಲಕ ರೈತ ಯುವಕ ಮಂಡಲ ಕಟ್ಟಡ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ರವರಿಗೆ ನೀಡಿದರು.

ಯುವಕ ಮಂಡಲದ ಅಧ್ಯಕ್ಷರು ಮನುದೇವ್ ಪರಮಲೆ,, ಕೋಶಾಧಿಕಾರಿ ನಾಗರಾಜ್ ಪರಮಲೆ, ನಿರ್ದೇಶಕರುಗಳಾದ ಪುನೀತ್ ಕರ್ನಾಜೆ ಮತ್ತು ಪ್ರಶಾಂತ್ ದೋಣಿಮನೆ , ಪಂಜ ವಲಯ ಮೇಲ್ವಿಚಾರಕಿ ಕಲಾವತಿ, ಸೇವಾಪ್ರತಿನಿಧಿ ತಾರಾ ಉಪಸ್ಥಿತರಿದ್ದರು.