ಫೆ. 15ರ ತನಕ ಕಾಂಚೋಡು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ದೈವಗಳ ನೇಮ

0

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಅಣ್ಣಪ್ಪಾದಿ ದೈವಗಳ ನೇಮೋತ್ಸವ ಫೆ. 11ರಂದು ಮೊದಲ್ಗೊಂಡು ಫೆ. 15ರ ವರೆಗೆ ನಡೆಯಲಿದೆ.
ಫೆ. 12ರಂದು ಬೆಳಗ್ಗೆಯಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಮಹಿಳೆಯರಿಂದ ಕುಂಕುಮಾರ್ಚನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ಮಂಜುನಾಥ ಸ್ವಾಮಿ ಮತ್ತು ಅಮ್ಮನವರ ಬಲಿ ಉತ್ಸವ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಫೆ. 13ರಂದು ಬೆಳಗ್ಗೆಯಿಂದ ವೈದಿಕ ಕಾರ್ಯಕ್ರಮಗಳು, ಪೂ. 10.00ರಿಂದ ಶ್ರೀ ಮಂಜುನಾಥ ಸ್ವಾಮಿ ಮತ್ತು ಅಮ್ಮನವರ ದರ್ಶನ ಬಲಿ ಉತ್ಸವ, ಗಂಧ ಪ್ರಸಾದ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ, ಕನ್ಯಾಕುಮಾರಿ ದೈವಗಳ ಭಂಡಾರ ತೆಗೆಯುವುದು, ಕಲ್ಲೇರಿತ್ತಾಯ ದೈವದ ಭಂಡಾರ ತೆಗೆದು ಕಲ್ಲೇರಿತ್ತಾಯ ಮಾಡದಲ್ಲಿ ತಂಬಿಲ ಸೇವೆಯ ಬಳಿಕ ಕಾಂಚೋಡು ಶ್ರೀದೇವಳದಲ್ಲಿ ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ಬಳಿಕ ಅಣ್ಣಪ್ಪ ಮಾಡದಲ್ಲಿ ಧರ್ಮದೈವಗಳ ನೇಮ ಕಾಣಿಕೆ, ಬೂಳ್ಯ ವಿತರಣೆ ನಡೆಯಲಿದೆ.


ಫೆ. 14ರಂದು ಬೆಳಿಗ್ಗೆ 7.30ರಿಂದ ಕಲ್ಲೇರಿತ್ತಾಯ ಮಾಡದಲ್ಲಿ ಕಲ್ಲೇರಿತ್ತಾಯ ದೈವನೇಮ, ಬೂಳ್ಯ ವಿತರಣೆ, ಶ್ರೀದೇವಳದ ಪ್ರಸಾದ ಭೋಜನ, ಅದೇ ದಿನ ದೇವಸ್ಥಾನದಲ್ಲಿ ಬೆಳಗ್ಗೆ 10.00ರಿಂದ ರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ, ಅಣ್ಣಪ್ಪ ಸ್ವಾಮಿ, ಪಂಜುರ್ಲಿ, ಗುಳಿಗ ದೈವಗಳ ಭಂಡಾರ ತೆಗೆಯುವುದು, ರಾತ್ರಿ 8.30ರಿಂದ ರಂಗಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ರಾತ್ರಿ 10.00ರಿಂದ ಅಣ್ಣಪ್ಪ ಸ್ವಾಮಿ ಮಾಡದಲ್ಲಿ ಅಣ್ಣಪ್ಪ ಸ್ವಾಮಿ, ಪಂಜುರ್ಲಿ, ದೈವಗಳ ನೇಮ, ಬಟ್ಟಲು ಕಾಣಿಕೆ, ಬೂಳ್ಯ ವಿತರಣೆ ನಡೆಯಲಿದೆ. ಬೆಳಗಿನ ಜಾವ ದೇವಾಲಯದ ವಠಾರದಲ್ಲಿ ಶ್ರೀ ಗುಳಿಗ ದೈವದ ನೇಮ, ಬೂಳ್ಯ ವಿತರಣೆ, ಬಲಿ ನಡೆಯಲಿದೆ.


ಫೆ. 11ರಂದು ಸಂಜೆ ಶ್ರೀ ಸತ್ಯಸಾಯಿ ಸೇವಾ ಸಮಿತಿ ಚೊಕ್ಕಾಡಿ ಇವರಿಂದ ಭಜನಾ ಕಾರ್ಯಕ್ರಮ, ಫೆ. 12ರಂದು ಬೆಳಿಗ್ಗೆ ಗೀತಜ್ಞಾನಯಜ್ಞ ತಂಡ ಬಾಳಿಲ ಇವರಿಂದ ಭಗವದ್ಗೀತಾ ಪಾರಾಯಣ ನಡೆಯಿತು. ಇಂದು ಬೆಳಿಗ್ಗೆ 11.30ರಿಂದ ಡಾ. ಎಸ್.ಪಿ. ಗುರುದಾಸ್ ಇವರಿಂದ ಹರಿಕಥೆ, ಸಂಜೆ 6.30ರಿಂದ ಶ್ರೀರಾಮ ಭಜನಾ ಮಂಡಳಿ ಕಲ್ಮಡ್ಕ ಇವರಿಂದ ಭಜನೆ, ಫೆ. 14ರಂದು ಸಂಜೆ 6.30ರಿಂದ ಶ್ರೀ ಮಹಾದೇವ ಭಜನಾ ಮಂಡಳಿ ಕಾಸರಗೋಡು ಇವರಿಂದ ಭಜನೆ ನಡೆಯಲಿದೆ.