ನಾಳೆ ಸುಳ್ಯ ಶ್ರೀ ವೆಂಕಟರಮಣ ಸೊಸೈಟಿ ವತಿಯಿಂದ ಬೆಳ್ಳಿಹಬ್ಬದ ಪ್ರಯುಕ್ತ ಕ್ರೀಡಾ ಸಮ್ಮಿಲನ

0

ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಸಂಸ್ಥೆಯ ಬೆಳ್ಳಿಹಬ್ಬ ಆಚರಣೆಯ ಪ್ರಯುಕ್ತ ಮಹಾತ್ಮಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಗಳ ಶಾಲಾ 2 ಕೊಠಡಿಗಳಿಗೆ ಗುದ್ದಲಿಪೂಜೆ
ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಇತರೆ ಸಹಕಾರಿ ಸಂಘಗಳು, ಶ್ರೀ ವೆಂಕಟರಮಣ ಸೊಸೈಟಿಯ ಸದಸ್ಯರಿಗೆ, ಆಡಳಿತ ಮಂಡಳಿ-ಸಲಹಾ ಸಮಿತಿ ಹಾಗೂ ಸಿಬ್ಬಂದಿಗಳಿಗೆ ಕ್ರೀಡಾ ಸಮ್ಮಿಲನ ನಾಳೆ
ಫೆ.24 ರಂದು ಶನಿವಾರ ಕೊಡಿಯಾಲ ಬೈಲ್ ಎಂ.ಜಿ.ಎಂ. ಶಿಕ್ಷಣ ಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯಲಿದೆ.


ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಇತರೆ ಸಹಕಾರಿ ಸಂಘಗಳ ಪುರುಷರಿಗೆ :ಹಗ್ಗ-ಜಗ್ಗಾಟ, ಅದೃಷ್ಟ ಪುರುಷ, ಮಹಿಳೆಯರಿಗೆ : ಹಗ್ಗ-ಜಗ್ಗಾಟ : ಅದೃಷ್ಟ ಮಹಿಳೆ.
ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪುರುಷರಿಗೆ ಮತ್ತು ಮಹಿಳೆಯರಿಗೆ ನಿಧಾನ ಬೈಕ್ / ಸ್ಕೂಟಿ ಓಡಿಸುವುದು, ಲಕ್ಕಿಗೇಮ್, ಒಂದು ನಿಮಿಷದ ಸ್ಪರ್ಧೆ , ಗುಂಡೆಸತ,
ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿಯ ಆಡಳಿತ ಮಂಡಳಿ / ಸಲಹಾ ಸಮಿತಿಯವರಿಗೆ ಹಿರಿಯರ ನಡಿಗೆ ಸ್ಪರ್ಧೆ ,ಭಾಷಣ ಸ್ಪರ್ಧೆ,ಒಂದು ನಿಮಿಷದ ಸ್ಪರ್ಧೆ,ಲಕ್ಕಿಗೇಮ್.
ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸಿಬ್ಬಂದಿಗಳಿಗೆ ಪುರುಷರಿಗೆ : ಹಗ್ಗ-ಜಗ್ಗಾಟ, ನಿಧಾನ ಬೈಕ್ ಓಡಿಸುವುದು, ಗುಂಡೆಸೆತ, ಮಹಿಳೆಯರಿಗೆ : ಹಗ್ಗಜಗ್ಗಾಟ,
ನಿಧಾನ ಸ್ಕೂಟಿ ಓಡಿಸುವುದು, ಲಕ್ಕಿಗೇಮ್ ಸ್ಪರ್ಧೆಗಳು ನಡೆಯಲಿದೆ. ಭಾಗವಹಿಸುವವರು ಫೆ.23 ರೊಳಗೆ ಮನೋಜ್ (9741489756), ಜಗದೀಶ್( 8970994988)ರವರನ್ನು ಸಂಪರ್ಕಿಸಬಹುದು.