ಮುರೂರು-ಮಂಡೆಕೋಲು ರಸ್ತೆ ಕಾಮಗಾರಿ ಆರಂಭ : ಸಂಚಾರ ಸ್ಥಗಿತ : ಸಾರ್ವಜನಿಕರು ಕಜಲ ರಸ್ತೆ ಬಳಸಲು ಸೂಚನೆ

0

ಮಂಡೆಕೋಲು ಗ್ರಾಮದ ಮುರೂರು – ಮಂಡೆಕೋಲು ರಸ್ತೆ ಅಭಿವೃದ್ಧಿಗೆ 30 ಲಕ್ಷ ಮಂಜೂರುಗೊಂಡಿದ್ದು ಕಾಮಗಾರಿ ಆರಂಭವಾಗಿದೆ ಈ ಕಾಮಗಾರಿ ಮುಗಿಯುವ ವರೆಗೆ ರಸ್ತೆ ಸಂಚಾರ ಸ್ಥಗಿತ ಮಾಡಲಾಗಿದ್ದು ಸಾರ್ವಜನಿಕರು ಕಜಲ ಮೂಲಕ ಬದಲಿ ರಸ್ತೆಯಲ್ಲಿ ಸಂಚಾರ ಮಾಡುವಂತೆ ಗ್ರಾ.ಪಂ. ಸದಸ್ಯ‌ ಬಾಲಚಂದ್ರ ದೇವರಗುಂಡ ತಿಳಿಸಿದ್ದಾರೆ.

ಮುರೂರಿಂದ ಬರುವವರು ಸೇತುವೆ ದಾಟಿ ಎಡ ಬದಿಯಲ್ಲಿ ಕಜಲ ರಸ್ತೆಯಾಗಿ ಮಂಡೆಕೋಲು ತಲುಪಬಹುದು. ಮಂಡೆಕೋಲಿನಂದ ಮುರೂರಿಗೆ ಹೋಗುವವರು ಮಂಡೆಕೋಲು ಹಾಲಿನ ಡೈರಿಯಿಂದ ಸ್ವಲ್ಪ‌ ಮುಂದೆ ಬಲ ಭಾಗದ ರಸ್ತೆಯ ಮೂಲಕ‌ ಕಜಲಕ್ಕಾಗಿ ಮುರೂರು ತಲುಪಬಹುದು. ಕಾಮಗಾರಿ ಆರಂಭ ಹಂತದಲ್ಲಿದ್ದು, ಮಗಿಯುವ ತನಕ ಸಾರ್ವಜನಿಕರು ಸಹಕಾರ ನೀಡುವಂತೆ ಅವರು ಕೇಳಿಕೊಂಡಿದ್ದಾರೆ.