ಕಲ್ಲುಗುಂಡಿ: ಕಡೆಪಾಲದಲ್ಲಿ ಕಾರು – ಬೈಕ್ ಅಪಘಾತ

0

ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಗಾಯಗೊಂಡ ಘಟನೆ ದ.ಕ. ಸಂಪಾಜೆ ಗ್ರಾಮದ ಕಡೆಪಾಲ ಎಂಬಲ್ಲಿ ಫೆ.13ರಂದು ಅಪರಾಹ್ನ ಸಂಭವಿಸಿದೆ.

ಕಲ್ಲುಗುಂಡಿ ಪೂರ್ಣಿಮಾ ಟೆಕ್ಸ್ ಟೈಲ್ಸ್ ಮಾಲಕ ಬಿ.ಆರ್. ಪದ್ಮಯ್ಯ ಅವರು ಸುಳ್ಯದಿಂದ ಕಲ್ಲುಗುಂಡಿಗೆ ಬರುತ್ತಿದ್ದ ವೇಳೆ ಕಡೆಪಾಲ ಎಂಬಲ್ಲಿ ಕಲ್ಲುಗುಂಡಿಯಿಂದ ಸುಳ್ಯಕ್ಕೆ ತೆರಳುತ್ತಿದ್ದ ಬೈಕ್ ಸವಾರ ಪೆರಾಜೆ ಗ್ರಾಮದ ಗಂಗಾಧರ ಪೆರಂಗಜೆ , ಕಲ್ಲುಗುಂಡಿಯ ಯುವಕ ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರನ ಹಣೆಗೆ ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಸುಳ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದೆ.