ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೂಮಿ ಖರೀದಿಗೆ ಧನ ಸಹಾಯ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೂಮಿ ಖರೀದಿ ಬಗ್ಗೆ ಗೋಪಾಲಕೃಷ್ಣ ಮಂಡೇಪು ಮತ್ತು ಶ್ರೀಮತಿ ಗುಣವತಿ ಮಂಡೇಪುರವರು ರೂ.ಒಂದು ಲಕ್ಷದ ಐದು ರೂಪಾಯಿ ಧನಸಹಾಯ ನೀಡಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿಯವರು ಧನಸಹಾಯ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಂಗಾಧರ ರೈ ಪುಡ್ಕಜೆ, ವಿಶ್ವನಾಥ ಭಟ್ ಕುರುಂಬುಡೇಲು , ಅರ್ಚಕ ಉದಯಕುಮಾರ್ ಕೆ.ಟಿ, ಹಾಗೂ ಲೋಕೇಶ್ ಬೆಳ್ಳಾರೆ ಉಪಸ್ಥಿತರಿದ್ದರು.