ಆಲೆಟ್ಟಿ : ಗುಂಡ್ಯ ಬಳಿ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು- ಪ್ರಯಾಣಿಕರೊಬ್ಬರಿಗೆ ಗಾಯ- ಆಸ್ಪತ್ರೆಗೆ ದಾಖಲು

0

ಆಲೆಟ್ಟಿಯ ಗುಂಡ್ಯ ಎಂಬಲ್ಲಿ ತಿರುವಿನಲ್ಲಿ ಸುಳ್ಯಕಡೆಯಿಂದ ಬಡ್ಡಡ್ಕ ಕಡೆಗೆ ಸಂಚರಿಸುತ್ತಿದ್ದ ಅಟೋ ರಿಕ್ಷಾಕ್ಕೆ ಬಡ್ಡಡ್ಕದಿಂದ ಸುಳ್ಯ
ಕಡೆಗೆ ಬರುತ್ತಿದ್ದ ಆಲ್ಟೋ ಕಾರೊಂದು ವಿರುದ್ಧ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದ ಘಟನೆ ಇದೀಗ ವರದಿಯಾಗಿದೆ.

ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾದಲ್ಲಿದ್ದ ಮಹಿಳೆಯೋರ್ವರ ಕಾಲಿಗೆ ಹಾಗೂ ಚಾಲಕನ ಕೈಗೆ ಗಾಯವಾಗಿದ್ದು ಅವರನ್ನು ಸುಳ್ಯ ಆಸ್ಪತ್ರೆಗೆದಾಖಲಿಸಿರುವುದಾಗಿ ತಿಳಿದು ಬಂದಿದೆ.
ರಿಕ್ಷಾದ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು ಕಾರಿನ ಎದುರು ಭಾಗಕ್ಕೆ ಹಾನಿಯಾಗಿದೆ.