ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ರಥಸಪ್ತಮಿ ಆಚರಣೆ

0

ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಫೆ. 16 ರಂದು ರಥಸಪ್ತಮಿ ಕಾರ್ಯಕ್ರಮ ನಡೆಯಿತು . ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಇವರು ರಥಸಪ್ತಮಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಬಳಿಕ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಮುಖ್ಯೋಪಾಧ್ಯಾಯನಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೂರ್ಯದೇವಾಲಯದಲ್ಲಿ ಸಾಮೂಹಿಕವಾಗಿ ಸೂರ್ಯನಮಸ್ಕಾರಗಳನ್ನು ಮಾಡಿದರು.