ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ “ಅನುಸಂಧಾನ- 2024” ಉಪನ್ಯಾಸ ಕಾರ್ಯಕ್ರಮ

0

ಕೆ.ವಿ.ಜಿ ಆಯುರ್ವೇದ ಕಾಲೇಜು ವತಿಯಿಂದ ಫೆ.10 ರಂದು ಕೆ.ವಿ.ಜಿ. ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಅನುಸಂಧಾನ-2024 “ರೀಸರ್ಚ್ ಮೆಥೆಡೋಲೋಜಿ ಮತ್ತು ಬಯೋ-ಸ್ಟಾಟಸ್ಟಿಕ್ಸ್” ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕೆ.ವಿ.ಜಿ.ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಕಾರ್ಯನಿರ್ವಾಹಕರಾದ ಡಾ.ಪುರುಷೋತ್ತಮ ಕೆ.ಜಿ. ಸ್ವಾಗತಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷರಾದ ಡಾ. ಕೆ.ವಿ.ಚಿದಾನಂದ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಶೋಧನೆಯ ಮಹತ್ವ ಹಾಗೂ ಅದರ ಉದ್ದೇಶವನ್ನು ತಿಳಿಸಿದರು. ವೈದ್ಯಕೀಯ ಕ್ಷೇತ್ರ ಇನ್ನಷ್ಟು ಮುಂದುವರಿಯಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ. ಕೆವಿಜಿ ಔಷಧ ತಯಾರಿಕ ಘಟಕ ಹಾಗೂ ಸಂಶೋಧನಾ ಕೇಂದ್ರದಲ್ಲಿ ಪ್ರಸ್ತುತ 200ಕ್ಕೂ ಅಧಿಕ ಔಷಧಗಳನ್ನು ತಯಾರಿಸುವಲ್ಲಿ ಯಶಸ್ವಿಯನ್ನು ಕಂಡಿರುವುದು ನಿರಂತರ ಸಂಶೋಧನೆ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.


ಕೆ.ವಿ.ಜಿ. ಆರ್ಯುವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಲೀಲಾಧರ ಡಿ.ವಿ. ಅವರು ಕಾರ್ಯಕ್ರಮವನ್ನುದ್ದೇಶಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕೆ.ವಿ.ಜಿ ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದಲ್ಲಿ ತಯಾರಿಸಲಾದ ನೂತನ ಉತ್ಪನ್ನಗಳಾದ ಮಹಾಮಂಜಿಷ್ಟಾದಿಕಾಢ ಮತ್ತು ಮಹಾರಾಸ್ನಾದಿಕಾಢಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಆಹ್ವಾನಿಸಿದ ಅತಿಥಿ ಉಪನ್ಯಾಸಕರಾದ ಡಾ. ಲಕ್ಷ್ಮೀನಾರಾಯಣ ಶೇಣೈ, ಸಹಾಯಕ ನಿರ್ದೇಶಕರು, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಮೈಸೂರು ಇವರು “ರಿಸರ್ಚ್ ಇನ್ ಆಯುರ್ವೇದ & ಸ್ಟಾಟಸ್ಟಿಕ್ಸ್” ಮತ್ತು “ಸಿನೊಪ್ಸಿಸ್ ರೈಟಿಂಗ್ & ಪಬ್ಲಿಕೆಷನ್ ಗೈಡ್ಲೈನ್ಸ್” ವಿಷಯದ ಮೇಲೆ ಉಪನ್ಯಾಸ ನೀಡಿದರು. ಇವರ ಪರಿಚಯವನ್ನು ಡಾ. ಸಂತೋಷ್ ನಾಯಕ್ ನೀಡಿದರು.


ಬೆಂಗಳೂರು ಸರ್ಕಾರಿ ಆಯುರ್ವೇದ ಕಾಲೇಜಿನ ಸಂಹಿತ ಮತ್ತು ಸಿದ್ಧಾಂತ ವಿಭಾಗದ ಮುಖ್ಯಸ್ಥ ಹಾಗೂ ಉಪನ್ಯಾಸಕ ಡಾ. ಆನಂದ ಕಟ್ಟಿರವರು “ಬೇಸಿಕ್ಸ್ ಆಫ್ ಡ್ರಗ್ ರಿಸರ್ಚ್ & ಕ್ಲೀನಿಕಲ್ ರಿಸರ್ಚ್ ಡಿಸೈನ್ಸ್” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಇವರನ್ನು ಡಾ. ಭಾಗ್ಯೇಶ್ ಕೆ. ಅವರು ಪರಿಚಯಿಸಿದರು.
ಇನ್ನೋರ್ವ ಅತಿಥಿ ಉಪನ್ಯಾಸಕರಾದ ಮಂಗಳೂರು ಕರ್ನಾಟಕ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಸಿಸಿಎಸ್‌ಸಿಎ ನೊಂದಾಯಿತ ಸದಸ್ಯ ಡಾ. ಅಜಿತ್ ಕಾಮತ್‌ರವರು “ಎನಿಮಲ್ ಎಕ್ಸ್ಪರಿಮೆಂಟೇಷನ್ – ಎತಿಕ್ಸ್ & ಗೈಡ್ಲೈನ್ಸ್” ವಿಷಯದ ಮೇಲೆ ಉಪನ್ಯಾಸ ನೀಡಿದರು. ಇವರ ಪರಿಚಯವನ್ನು ಡಾ. ಗೋಪಾಲಕೃಷ್ಣ ನಾಯಕ್ ನೀಡಿದರು.


ಕೆ.ವಿ.ಜಿ. ಆಯುರ್ವೇದ ಕಾಲೇಜಿನ ಶಾಲಾಖ್ಯ ತಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಉದಯಶಂಕರ ಎನ್. ರವರು ನಿರ್ಣಾಯಕ ಮಾತುಗಳನ್ನು ಪ್ರಸ್ತಾಪಿಸಿದರು. ವಿದ್ಯಾರ್ಥಿ ಕ್ಷೇಮ ಅಧಿಕಾರಿ ಡಾ.ಹರ್ಷಿತಾ ಎಂ. ವಂದಿಸಿದರು. ಕು. ದೀಕ್ಷಾ ಡಿ.ಪಿ ಮತ್ತು ಕು. ದೀಪ್ತಿ ಡಿ. ಕಾರ್ಯಕ್ರಮ ನಿರೂಪಿಸಿದರು. ಕು. ಕೃತಿಕಾ ಮತ್ತು ಕು. ಡಿಲ್ನಾ ಪ್ರಾರ್ಥಿಸಿದರು.
ಅತಿಥಿ ಉಪನ್ಯಾಸಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು ಉಪಸ್ಥಿತರಿದ್ದರು. 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉಪನ್ಯಾಸದ ಸದುಪಯೋಗವನ್ನು ಪಡೆದುಕೊಂಡರು.


ಕಾರ್ಯಕ್ರಮವು ಕಾಲೇಜಿನ ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ ವಿಭಾಗದ ಮುಖ್ಯಸ್ಥ ಹಾಗೂ ಕೆ.ವಿ.ಜಿ. ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಕಾರ್ಯನಿರ್ವಾಹಕ ಡಾ.ಪುರುಷೋತ್ತಮ ಕೆ.ಜಿ. ಮತ್ತು ಶಾಲಾಖ್ಯ ತಂತ್ರ ವಿಭಾಗದ ಮುಖ್ಯಸ್ಥ ಡಾ. ಉದಯಶಂಕರ.ಎನ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದು, ಕಾರ್ಯಕ್ರಮದ ನಿಯೋಜಕರಾದ ಡಾ.ಹರ್ಷಿತಾ.ಎಂ, ಡಾ. ಸಂತೋಷ್ ನಾಯಕ್, ಡಾ. ಗೋಪಾಲಕೃಷ್ಣ ನಾಯಕ್, ಡಾ. ಶ್ರುತನ್ ಕೆ ಮತ್ತು ಇತರ ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಯ ಸಹಕಾರದಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿ ಹಮ್ಮಿಕೊಂಡಿತು.