ಸುಳ್ಯ ಶ್ರೀರಾಮ್ ಪೇಟೆಯಲ್ಲಿ ಕಾರು ಮತ್ತು ಬೈಕ್ ಡಿಕ್ಕಿ, ಬೈಕ್ ಸವಾರರಿಗೆ ಗಾಯ,ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲು

0

ಸುಳ್ಯ ಶ್ರೀರಾಮ್ ಪೇಟೆ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡಿದ್ದು ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಫೆ.16ರಂದು ಬೆಳಿಗ್ಗೆ ಶಾಂತಿನಗರ ನಿವಾಸಿ ಅಭಿಲಾಷ್ ಎಂಬುವವರು ತಮ್ಮ ಪಲ್ಸರ್ ಬೈಕಿನಲ್ಲಿ ಸುಳ್ಯ ಪೇಟೆಗೆ ಬರುತ್ತಿದ್ದ ಸಂದರ್ಭ ಸಂಗಂ ಬಿಲ್ಡಿಂಗ್ ಬಳಿ ಬರುತ್ತಿದ್ದಂತೆ ರಸ್ತೆ ಬದಿಯಲ್ಲಿ ನಿಂತಿದ್ದ ಕೆ ಎ 70 ಎಮ್ 5066 ನಂಬರ್ ನ ಮಾರುತಿ ಆಲ್ಟೊ ಕಾರು ಮುಂದಕ್ಕೆ ಚಲಿಸಿ ಡಿಕ್ಕಿ ಸಂಭವಿಸಿದೆ.

ಈ ಸಂದರ್ಭದಲ್ಲಿ ಅಭಿಲಾಷ್ ಮತ್ತು ಸಹಸವಾರ ಪೃಥ್ವಿರಾಜ್‌‌ ಎಂಬವರು ರಸ್ತೆಗೆ ಬಿದ್ದಿದ್ದು ಇಬ್ಬರಿಗೂ ಸಣ್ಣಪುಟ್ಟ ಗಾಯಗಳು ಸಂಭವಿಸಿದೆ. ಘಟನೆಯ ಕುರಿತು ಅಭಿಲಾಷ್ ರವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ದೂರು ಸ್ವೀಕರಿಸಿರುವ ಪೊಲೀಸರು ಕಾರು ಚಾಲಕ ರಂಜಿತ್ ಎಚ್ ಪಿ ಎಂಬುವರ ಮೇಲೆ ಅ,ಕ್ರ ನಂ: 24/2024 ಕಲಂ 279, 337 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.