ಮಂಡೆಕೋಲು ಶಾಖೆಯ ವತಿಯಿಂದ SKSSF ಸ್ಥಾಪನಾ ದಿನದ ಪ್ರಯುಕ್ತ ದ್ವಜಾರೋಹಣ

0

ಎಸ್ ಕೆ ಎಸ್ ಎಸ್ ಎಫ್ ಸ್ಥಾಪನಾ ದಿನಾಚರಣೆಯ ಪ್ರಯುಕ್ತ ಮಂಡೆಕೋಲು ಎಸ್ ಕೆ ಎಸ್ ಎಸ್ ಎಫ್ ಶಾಖಾ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಇಂದು ನಡೆಯಿತು. ಮಾರ್ಗ ಮಂಡೆಕೋಲು ಮುಹಿಯದ್ದೀನ್ ಜುಮಾ ಮಸೀದಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆದು SYS ಸುಳ್ಯ ವಲಯ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಕತ್ತರ್ ಹಾಗೂ MJM ಜಮಾಹತ್ ಕಮೀಟಿ ಕಾರ್ಯದರ್ಶಿ ಅಬ್ದುಲ್ಲಾ ಮಾರ್ಗ ರವರು ದ್ವಜಾರೋಹಣ ನೆರವೇರಿಸಿದರು. ಅಬ್ದುಲ್ ಖಾದರ್ ಮುಸ್ಲಿಯಾರ್ ಮಾಡವು ದುವಾ: ನೇತೃತ್ವವನ್ನು ನೀಡಿ ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮದರಸ ಅದ್ಯಾಪಕರು SYS ಕಾರ್ಯಕರ್ತರು ಮತ್ತು SKSSF ನ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಣೆ ಮಾಡಲಾಯಿತು.