ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸಿಲ್ವರ್ ಜೋನ್ ಫೌಂಡೇಶನ್ ಒಲಿಂಪ್ಯಾಡ್ಸ್ ಪರೀಕ್ಷೆಯ ಬಹುಮಾನ ವಿತರಣೆ

0

ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ ಸಿಲ್ವರ್ ಜೋನ್ ಫೌಂಡೇಶನ್ ಒಲಿಂಪ್ಯಾಡ್ಸ್ ನ್ಯೂ ಡೆಲ್ಲಿ ಆಯೋಜಿಸಿರುವ ಇಂಟರ್ನ್ಯಾಷನಲ್ ಒಲಂಪಿಯಾಡ್ ಆಫ್ ಇಂಗ್ಲಿಷ್ ಲ್ಯಾಂಗ್ವೇಜ್ ಪರೀಕ್ಷೆಯಲ್ಲಿ ಎಂಟು ವಿದ್ಯಾರ್ಥಿಗಳು ಚಿನ್ನದ ಪದಕವನ್ನು ಪಡೆದಿದ್ದು ಮೂರು ವಿದ್ಯಾರ್ಥಿಗಳು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಶಾಂತಲಾ ವಿದ್ಯಾಪೀಠ ಐಸಿಎಸ್ ಸಿ ಶಾಲೆ ಮೈಸೂರು ಇದರ ಪ್ರಾಂಶುಪಾಲರಾದ ಡಿಂಬಲ್ ಸೆಬಾಸ್ಟಿಯನ್ ರವರು ಮತ್ತು ಶಾಲಾ ಅಧ್ಯಕ್ಷರಾದ ರುಕ್ಮಯ್ಯ ದಾಸ್ ರವರು ವಿದ್ಯಾರ್ಥಿಗಳಿಗೆ ಪದಕವನ್ನು ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್, ಶಿಕ್ಷಕ , ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.