ಇಂದು ಬೆಳ್ಳಾರೆ, ಗೌರಿಪುರಂ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಷಡಾಧಾರ ಪ್ರತಿಷ್ಠೆ

0

ಬೆಳ್ಳಾರೆಯ ಗೌರಿಪುರಂನ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಷಡಾಧಾರ ಪ್ರತಿಷ್ಠೆ (ಫೆ. 22) ಇಂದು ನಡೆಯಲಿದೆ.
ಫೆ. 20ರಂದು ಸಂಜೆ ವಿವಿಧ ವೈದಿಕ ಕಾರ್ಯಗಳು, ದುರ್ಗಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಇಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಗಳು ನಡೆಯಿತು. ಮಧ್ಯಾಹ್ನ 12.21ರಿಂದ 1.39ರ ಶುಭ‌ ಮುಹೂರ್ತದಲ್ಲಿ ಷಡಾಧಾರ ಪ್ರತಿಷ್ಠಾದಿಗಳು ಹಾಗೂ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಪೂರ್ವಾಹ್ನ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುಬ್ರಹ್ಮಣ್ಯ ಮಠಾದೀಶರಾದ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿ, ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಕ್ಷೇತ್ರದ ತಂತ್ರಿ ಕುನ್ನತ್ತಿಲ್ ಬ್ರಹ್ಮಶ್ರೀ ಮುರಳಿಕೃಷ್ಣ ನಂಬೂದಿರಿ ಮತ್ತು ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ. ಲಕ್ಷ್ಮೀನಾರಾಯಣ ಅಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.