ಶಾಂತಿನಗರ ಸ್ಟೇಡಿಯಂ ರಸ್ತೆಯಲ್ಲಿ ಅಪಾಯಕಾರಿ ಗುಂಡಿ ನಿರ್ಮಾಣ

0


ಶಾಂತಿನಗರದಿಂದ ಸ್ಟೇಡಿಯಂ ಕಡೆಗೆ ಹೋಗುತ್ತಿರುವ ರಸ್ತೆಯ ಮಧ್ಯದಲ್ಲಿ ಕಳೆದ ಮೂರು ದಿನಗಳಿಂದ ಉದ್ದನೆಯ (ಕಡಿ) ತೋಡಿ ಸರಿಯಾಗಿ ಮುಚ್ಚದೇ ಇರುವ ಕಾರಣ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.

ನೀರಿನ ಪೈಪ್ ಲೈನ್ ಅಳವಡಿಸುವ ಸಂದರ್ಭದಲ್ಲಿ ಈ ಕಡಿಯನ್ನು ತೋಡಲಾಗಿದ್ದು ಅದನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಅಲ್ಲೇ ನೆಲೆಸಿರುವ ಕೆಲಸಗಾರರಲ್ಲಿ ಸ್ಥಳೀಯರು ಹಲವು ಬಾರ ತಿಳಿಸಿದರೂ ಅದು ನಮ್ಮ ಇನ್ನೊಂದು ಗುಂಪಿನವರು ಮಾಡುತ್ತಿರುವ ಕೆಲಸ ಅವರಲ್ಲೇ ಹೇಳಬೇಕು ಎಂದು ತಿಳಿಸಿದ್ದಾರೆ. ಸಂಬಂಧಪಟ್ಟ ಕಾಂಟ್ರಾಕ್ಟ್ ರವರ ಗಮನಕ್ಕೆ ತಂದರೂ ಸರಿಪಡಿಸುತ್ತೇವೆ ಎಂದಷ್ಟೇ ಹೇಳಿದ್ದಾರೆ. ಅದರೆ ಇನ್ನೂ ಸರಿಪಡಿಸಿದೇ ಇರುವುದರಿಂದ ಸ್ಟೇಡಿಯಂಗೆ ಆಡಲು ಬರುವ ಆಟಗಾರರಿಗೆ, ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಗೂ ನಿತ್ಯ ಸಂಚಾರ ಮಾಡುವ ಜನರಿಗೆ ತೀವ್ರ ತೊಂದರೆ ಉಂಟಾಗಿದೆ. ಜೊತೆಗೆ ಶಾಂತಿನಗರದ ಕ್ರಾಸ್ ವರೆಗೆ ಅನೇಕ ಕಡೆಗಳಲ್ಲಿ ಈ ರೀತಿಯ ಕಡಿಗಳನ್ನು ತೋಡಲಾಗಿದ್ದು ಇದನ್ನು ಸಮರ್ಪಕವಾಗಿ ಮುಚ್ಚದಿದ್ದರೆ ಮುಂದೆ ತೀವೃ ತೊಂದರೆಯಾಗಲಿದೆ ಎಂದು ಸ್ಥಳೀಯರು ತಿಳಿಸಿರುತ್ತಾರೆ.