ಫೆ. 22: ಬೆಳ್ಳಾರೆಯ ಅಜಪಿಲ ಒತ್ತೆಕೋಲಕ್ಕೆ ಕೊಲ್ಲಿ‌ ಮುಹೂರ್ತ

0

ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಏ. 7-8ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಲಿದ್ದು, ಮೇಲೇರಿಗೆ ಕೊಳ್ಳಿ ಮುಹೂರ್ತವು ಮುಖ್ಯ ಕರ್ಮಿ ಲೋಕೇಶ್ ಪಾಲ್ತಾಡು ಇವರ ನೇತೃತ್ವದಲ್ಲಿ ಫೆ. 22ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ,ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಚೀಮುಳ್ಳು, ಕಾರ್ಯದರ್ಶಿ ಪದ್ಮನಾಭ ಚೂoತಾರು, ಕೋಶಾಧಿಕಾರಿ ಆನಂದ ಗೌಡ ಪಡ್ಪು,ಉಪಾಧ್ಯಕ್ಷರಾದ ಚಂದ್ರಶೇಖರ ಪನ್ನೆ, ಜತೆ ಕಾರ್ಯದರ್ಶಿ ಶಶಿಧರ ಮಣಿಯಾಣಿ ಬೀಡು, ಸ್ನೇಹಿತರ ಕಲಾಸಂಘದ ಅಧ್ಯಕ್ಷರಾದ ಪದ್ಮನಾಭ ಬೀಡು ಹಾಗೂ ಸಮಿತಿಯ ಪೂರ್ವ ಅಧ್ಯಕ್ಷರುಗಳು, ಸದಸ್ಯರು, ಊರ ಹಾಗೂ ಪರ ಊರಿನ ಭಕ್ತಾದಿ ಬಂಧುಗಳು ಉಪಸ್ಥಿತರಿದ್ದರು.