ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲಾ ಸ್ಕೌಟ್ & ಗೈಡ್‌ಗೆ ಬ್ಯಾಂಡ್ ಸೆಟ್ ಕೊಡುಗೆ

0

ಇತ್ತೀಚೆಗೆ ಸುಳ್ಯದಲ್ಲಿ ನಡೆದ ‘ದಿಶಾನಿ’ ಲಯನ್ಸ್ ಪ್ರಾಂತೀಯ ಸಮ್ಮೇಳನದ ಸವಿ ನೆನಪಿಗಾಗಿ ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲಾ ಸ್ಕೌಟ್ & ಗೈಡ್ ಗೆ ಬ್ಯಾಂಡ್ ಸೆಟ್ ನ್ನು ಫೆ. ೨೨ ರಂದು ಕೊಡುಗೆಯಾಗಿ ನೀಡಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂತೀಯ ೭ ರ ಪ್ರಾಂತೀಯ ಅಧ್ಯಕ್ಷೆ ಶ್ರೀಮತಿ ರೇಣುಕಾ ಸದಾನಂದ ಜಾಕೆ ಎಂಜೆಎಫ್‌ರವರು ವಹಿಸಿ ಸ್ವಾಗತಿಸಿದರು. ಶಾಲಾ ಸಂಚಾಲಕ ಜಾಕೆ ಸದಾನಂದ ಎಂಜೆಎಫ್ ಪ್ರಾಸ್ತಾವಿಕ ಮಾತನಾಡಿದರು.
ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿ. ಸೋಜಾ ಪಿಎಂಜಿಎಫ್ ರವರು ಬ್ಯಾಂಡ್ ಬಾರಿಸಿ ಉದ್ಘಾಟಿಸಿ, ಶುಭ ಹಾರೈಸಿದರು.


ವೇದಿಕೆಯಲ್ಲಿ ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಓಸ್ವಾಲ್ ಡಿ. ಸೋಜಾ ಎಂಜೆಎಫ್, ಜಿಲ್ಲಾ ಕ್ಯಾಬಿನೆಟ್ ಖಜಾಂಜಿ ಸುಧಾಕರ ಶೆಟ್ಟಿ ಎಂಜೆಎಫ್, ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷೆ ಅನಿತಾ ಲಸ್ರಾದೊ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ , ಸ್ಕೌಟ್ ಶಿಕ್ಷಕ ಕುಮಾರ್, ಸಹಶಿಕ್ಷಕಿ ಮೀನಾಕುಮಾರಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ರೀಜನ್ ಎಂಬಾಸಿಡರ್ ಪ್ರೊ. ಬಾಲಚಂದ್ರ ಗೌಡ ಎಂಜೆಎಫ್, ಸುಳ್ಯ ಲಯನ್ಸ್ ಕ್ಲಬ್‌ನ ಸ್ಥಾಪಕ ಸದಸ್ಯರಾದ ಜಾನ್ ವಿಲಿಯಂ ಲಸ್ರಾದೋ, ರಾಷ್ಟ್ರೀಯ ಸೇವಾ ದಳದ ಜಿಲ್ಲಾ ನಿರ್ದೇಶಕ ಚಂದ್ರಶೇಖರ ನಂಜೆ, ಲಯನ್ಸ್ ಸದಸ್ಯರು, ಶಾಲಾ ಆಡಳಿತ ಮಂಡಳಿ ನಿರ್ದೇಶಕರು, ಪೋಷಕರು, ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಶಿವಪ್ರಸಾದ್ ವಂದಿಸಿದರು.