ಆಶಿಕಾ ಜಿ.ಆರ್. ಗೆ ಬಿ ಫಾರ್ಮದಲ್ಲಿ ದ್ವಿತೀಯ ರ್‍ಯಾಂಕ್

0

ಅಜ್ಜಾವರ ಗ್ರಾಮದ ರಾಜೇಶ್ ಗೋರಡ್ಕ- ತುಳಸಿ ದಂಪತಿಯ ಪುತ್ರಿ ಕು. ಆಶಿಕಾ ಜಿ.ಆರ್. ಇವರು ಬಿ.ಫಾರ್ಮದಲ್ಲಿ ಯುನಿವರ್ಸಿಟಿ ಮಟ್ಟದಲ್ಲಿ ದ್ವಿತೀಯ ರ್‍ಯಾಂಕ್ ಪಡೆದಿದ್ದಾರೆ. ತನ್ನ ಕಲಿಕೆಯ 5 ವಿಷಯದಗಳಲ್ಲಿ ಮತ್ತು ಒಂದು ಪ್ರಾಜೆಕ್ಟ್ ನಲ್ಲಿ ರ್‍ಯಾಂಕ್ ಪಡೆದಿರುವ ಇವರು ಮಂಗಳೂರಿನ ಕರಾವಳಿ ಕಾಲೇಜು ಆಫ್ ಫಾರ್ಮಸಿಯ ವಿದ್ಯಾರ್ಥಿನಿ.

ಅಜ್ಜಾವರದ ವಿವೇಕ್ ಶಾಲೆ, ಸುಳ್ಯದ ಗ್ರೀನ್ ವ್ಯೂ ಪ್ರೌಢ ಶಾಲೆ ಮತ್ತು ಕೆ.ವಿ.ಜಿ. ಪ್ರೌಢಶಾಲೆ ಹಾಗೂ ಆಲೆಟ್ಚಿ ಮಿತ್ತಡ್ಕದಲ್ಲಿರುವ ರೋಟರಿ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.