ಎಲಿಮಲೆ ಜುಮಾ ಮಸೀದಿ ನೂತನ ಆಡಳಿತ ಸಮಿತಿ ಪದಾಧಿಕಾರಿಗಳ ಆಯ್ಕೆ

0

ಎಲಿಮಲೆ ಬದ್ರಿಯಾ ಜಮಾಅತ್ ಸಮಿತಿಯ ಮಹಾಸಭೆಯು ಮದ್ರಸ ಸಭಾಂಗಣದಲ್ಲಿ ದಲ್ಲಿ ಸಮಿತಿ ನಿಕಟಪೂರ್ವ ಅಧ್ಯಕ್ಷರಾದ ಇಕ್ಬಾಲ್ ಎಲಿಮಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿ ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆದು ನೂತನ ಸಮಿತಿಯನ್ನು ಸರ್ವಾನುಮತದಿಂದ ಆರಿಸಲಾಯಿತು.


ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಪಾಣಾಜೆ, ಉಪಾಧ್ಯಕ್ಷರಾಗಿ ಮಹಮೂದ್ ಸಖಾಫಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಎಲಿಮಲೆ, ಕೋಶಾಧಿಕಾರಿಯಾಗಿ ಇಬ್ರಾಹಿಂ ಜೀರ್ಮುಕ್ಕಿ ಹಾಗೂ ಸದಸ್ಯರಾಗಿ ಸೂಫಿ ಮುಸ್ಲಿಯಾರ್, ಅಹಮದ್ ಕುಂಞ, ಜುನೈದ್ ಸಖಾಫಿ, ಫೈಝಲ್ ಜೀರ್ಮುಕ್ಕಿ, ಅಬ್ದುಲ್ಲಾ ಜಿ ಎ ಕೆ, ನಿಯಾಝ್ ವೈ ಎಚ್ ಆಯ್ಕೆಯಾದರು.