ದೊಡ್ಡಕುಮೇರಿ : ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ತೊಡಿಕಾನ ಗ್ರಾಮದ ದೊಡ್ಡ ಕುಮೇರಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಮಾರ್ಚ್ 9 ಮತ್ತು 10 ರಂದು ನಡೆಯುವ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆಡಳಿತ ಮಂಡಳಿಯ ಅಧ್ಯಕ್ಷ ಭರತ್ ಬಾಳೆಕಜೆಯವರ ಅಧ್ಯಕ್ಷತೆಯಲ್ಲಿ ಫೆ. 22 ರಂದು ನಡೆಯಿತು.


ಅರಂತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಅಡ್ತಲೆ ಹಾಗೂ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ , ಅರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭವಾನಿ ಚಿಟ್ಟನೂರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.


ಆಮಂತ್ರಣ ಪತ್ರಿಕೆಯ ಬಿಡುಗಡೆ ಮುನ್ನ ದೇವಸ್ಥಾನದ ಹಿರಿಯ ಪೂಜಾರಿ ಚನಿಯ ದೊಡ್ಡಕುಮೇರಿ ಇವರ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು.

ಕಾರ್ಯಕ್ರಮದಲ್ಲಿ ಆಡಳಿತ ಸಮಿತಿಯ ಗೌರವ ಅಧ್ಯಕ್ಷ ಕೇಪು ದೊಡ್ಡಕುಮೇರಿ, ಕೋಶಾಧಿಕಾರಿ ರವೀಂದ್ರ ಪಂಜಿಕೋಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಧರ ದೊಡ್ಡಕುಮೇರಿ , ವಿವಿಧ ಸಮಿತಿಗಳ ಮುಖಂಡರಾದ ಸುನಂದ ಅಡಿಗಾರ, ಮಹೇಶ್ ಬಾಳೆಕಜೆ , ವಾಸುದೇವ ಬಾಳೆಕಜೆ, ಗೋಪಾಲಕೃಷ್ಣ ಗುಂಡಿಗದ್ದೆ, ದೈವಸ್ಥಾನದ ಪೂಜಾರಿಗಳಾದ ಗುರುವಪ್ಪ ದೊಡ್ಡಕುಮೇರಿ, ಬಾಬು ಎಂ, ಚೌಕಾರು ದೊಡ್ಡಕುಮೇರಿ , ಬಾಬು ದೊಡ್ಡ ಕುಮೇರಿ, ಶಂಕರ ದೊಡ್ಡಕುಮೇರಿ,ಸ್ಥಳೀಯ ಎಲ್ಲ ಮನೆಯವರು ಹಾಗೂ ಊರವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದೇವಪ್ಪ ಹೈದಂಗೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಸಂತೋಷ್ ಕುತ್ತಮೊಟ್ಟೆ ಯವರ ನೇತೃತ್ವದಲ್ಲಿ ವಿವಿಧ ಬೈಲುವಾರು ಸಮಿತಿಗಳನ್ನು ರಚಿಸಿ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಯಿತು.