ಅಕ್ರಮ ಗೋ ಸಾಗಾಟ ಶಂಕೆ : ಸುಳ್ಯದಲ್ಲಿ ವಾಹನಕ್ಕೆ ತಡೆ

0

ಅಕ್ರಮವಾಗಿ ಗೋವನ್ನು ಸಾಗಿಸಲಾಗುತ್ತಿದೆ ಅನ್ನುವ ಮಾಹಿತಿ ಹಿನ್ನೆಲೆಯಲ್ಲಿ ಸುಳ್ಯ ನಗರ ಬಜರಂಗದಳದ ಕಾರ್ಯಕರ್ತರು ವಾಹನವೊಂದನ್ನು ಸುಳ್ಯದ ಜ್ಯೋತಿ ಸರ್ಕಲ್ ಬಳಿ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಚಾಲಕನನ್ನು ವಿಚಾರಿಸಿದಾದ ಕೇರಳ ಮೂಲದವರೆಂದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾಗಿರುವ ಕೇರಳದ ಸ್ವರ್ಗದವರೆಂದು ತಿಳಿದು ಬಂದಿದೆ. ಗೋವನ್ನು ಕೇರಳಕ್ಕೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇದೀಗ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆಂದು ತಿಳಿದುಬಂದಿದೆ.