ಮುರುಳ್ಯ ಗ್ರಾಮ ಸಭೆಯಲ್ಲಿ ಹೈಡ್ರಾಮಾ

0

ಡಿ.ಸಿ. ಗ್ರಾಮ ವಾಸ್ತವ್ಯ ನಡೆದು ಎರಡು ವರ್ಷ ಕಳೆದರೂ ಬಾರದ ಹಣ

ಗ್ರಾಮ ಸಭೆಯಲ್ಲಿ ನೆಲದಲ್ಲಿ ಮಲಗಿ ಪ್ರತಿಭಟಿಸಿದ ಶಾಮಿಯಾನ ಮಾಲಕ

ಫೆ. 27ರಂದು ನಡೆದ ಮುರುಳ್ಯ ಗ್ರಾಮ ಸಭೆಯಲ್ಲಿ ಹೈಡ್ರಾಮ ನಡೆಯಿತು.
ಎರಡು ವರ್ಷಗಳ ಹಿಂದೆ ಅಲೆಕ್ಕಾಡಿಯಲ್ಲಿ ನಡೆದ ಡಿ.ಸಿ. ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಶಾಮಿಯಾನ ಮತ್ತು ಸೌಂಡ್ಸ್ ವ್ಯವಸ್ಥೆ ಮಾಡಿದ ಶ್ರೀ ದೇವಿ ಶಾಮಿಯಾನದ ಮಾಲಕರಿಗೆ ಇದುವರೆಗೆ ಹಣ ಪಾವತಿಯಾಗಿರದ ಬಗ್ಗೆ ಮಾಲಕ ಶರತ್ ಅಲೆಕ್ಕಾಡಿಯವರು ಗ್ರಾಮಸಭೆಯಲ್ಲಿ ಧ್ವನಿ ಎತ್ತಿದಾಗ ಸರಿಯಾದ ಸ್ಪಂದನ ಸಿಗಲಿಲ್ಲ. ಇದರಿಂದ ಬೇಸತ್ತ ಶರತ್ ರವರು ವೇದಿಕೆಯ ಎದುರುಗಡೆ ನೆಲದಲ್ಲಿ ಮಲಗಿ ಪ್ರತಿಭಟಿಸಿದರು.


ಬಿಲ್ ನ್ನು ಮೇಲಧಿಕಾರಿಗಳಿಗೆ ಕಳುಹಿಸಿರುವುದಾಗಿ ಕಂದಾಯ ಇಲಾಖೆಯ ಗ್ರಾಮಕರಣಿಕರು ಹೇಳಿದಾಗ ನನಗೆ ಆರ್ಡರ್ ಕೊಟ್ಟದ್ದು ಪಂಚಾಯತ್ ನವರು. ಅವರೇ ಹಣ ವಸೂಲಿ ಮಾಡಿ ಕೊಡಲಿ. ಹಣ ನೀಡದೆ ನಾನು ಇಲ್ಲಿಂದ ಹೋಗುವುದಿಲ್ಲವೆಂದು ಶರತ್ ಹೇಳಿದರು.
ಕೊನೆಯಲ್ಲಿ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಮಾ. 20ರ ಒಳಗಾಗಿ ಬಾಡಿಗೆ ಹಣ ನೀಡುವುದಾಗಿ ಪಂಚಾಯತ್ ಆಡಳಿತ ಮಂಡಳಿಯವರು ಹೇಳಿದ‌ ಮೇಲೆ ಶರತ್ ಅಲ್ಲಿಂದ ತೆರಳಿದರು.