ಕುಡಿಯುವ ನೀರಿನ ಕೊರತೆ ಬರದಂತೆ ಸಿದ್ದರಾಗಿರಲು ತಾ.ಪಂ.ನಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಸಭೆ

0

ಸಮಸ್ಯೆ ಇಲ್ಲವೆಂದು ನೀವು ಹೇಳಿಯೇ ನಮ್ಮ ತಾಲೂಕು ಅಭಿವೃದ್ಧಿಯಾಗದ್ದು, ಸಮಸ್ಯೆ ಹೇಳಿ ಅನುದಾನ ಪಡೆಯಿರಿ : ಭಾಗೀರಥಿ ಮುರುಳ್ಯ

“ಸಮಸ್ಯೆ ಇಲ್ಲವೆಂದು ನೀವು ಹೇಳಿಯೇ ಅಭಿವೃದ್ಧಿಯಲ್ಲಿ ನಮ್ಮ ತಾಲೂಕು ಹಿಂದೆ ಬಿದ್ದಿರುವುದು ಸಮಸ್ಯೆ ಹೇಳಿಕೊಳ್ಳಿ. ಅನುದಾನ ಪಡೆದು ಕಾಮಗಾರಿ ಆಗುವಂತೆ ಮಾಡಿ” ಎಂದು ಶಾಸಕಿ ಭಾಗಿರಥಿ ಮುರುಳ್ಯ ಅಧಿಕಾರಿಗಳಿಗೆ ಎಚ್ಚರ ನೀಡಿದ್ದಾರೆ.


ಬೇಸಿಗೆ ಕಾಲಿಡುತ್ತಿರುವುದರಿಂದ ಮುಂದಕ್ಕೆ ತಾಲೂಕಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಈಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಕ್ಕಾಗಿ ಇಂದು ಅಪರಾಹ್ನ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಪಿಡಿಒಗಳ ಕಾರ್ಯದರ್ಶಿಗಳ ಸಭೆಯನ್ನು ಕರೆಯಲಾಗಿತ್ತು. ಖಾಸಗಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಜಿ. ಮಂಜುನಾಥ್ ತಾಲೂಕು ಪಂಚಾಯತ್ ಮ್ಯಾನೇಜರ್ ಹರೀಶ್ ರಾವ್ ಉಪಸ್ಥಿತರಿದ್ದರು.
ಪಂಚಾಯತ್‌ಗಳಲ್ಲಿ ಮುಂದಕ್ಕೆ ಎದುರಾಗಬಹುದಾದ ನೀರಿನ ಸಮಸ್ಯೆಗಳ ಬಗ್ಗೆ ಹೇಳುವಂತೆ ಎಲ್ಲಾ ಪಿಡಿಒಗಳಿಗೆ ಸೂಚಿಸಿ, ಅವರ ವರದಿ ಆಲಿಸುತ್ತಿರುವಾಗ ಕೆಲವು ಪಿಡಿಓಗಳು ‘ನಮ್ಮಲ್ಲಿ ದೊಡ್ಡ ಸಮಸ್ಯೆ ಇಲ್ಲ’ ಎಂದು ಹೇಳತೊಡಗಿದಾಗ ಶಾಸಕರು, “ನೀವು ಹೀಗೆ ಹೇಳಿಯೇ ನಮಗೆ ಅನುದಾನ ಬಾರದಿರುವುದು. ತಾಲೂಕು ಅಭಿವೃದ್ಧಿಯಾಗದಿರುವುದು, ಕೇವಲ ಕಾಲೋನಿಗಳಿಗೆ ಮಾತ್ರ ಅಲ್ಲ ನಿಮ್ಮ ವ್ಯಾಪ್ತಿಯಲ್ಲಿರುವ ಶಾಲೆ, ಗೋಶಾಲೆ, ಕಚೇರಿಗಳು, ಜನವಸತಿ ಎಲ್ಲಾ ಕಡೆಯ ನೀರಿನ ಸಮಸ್ಯೆಗಳ ಬಗ್ಗೆಯೂ ತಿಳಿದು ನೀವು ವರದಿ ನೀಡಬೇಕು ಅದರ ಆಧಾರದಲ್ಲಿ ನಾವು ಅನುದಾನ ಕೇಳಿ ತರಿಸಿ ಕೊಡುತ್ತೇವೆ” ಎಂದು ಹೇಳಿದರು ಎಲ್ಲಾ ಪಂಚಾಯತಿಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.