ಅರಂಬೂರು: ಪಾಲಡ್ಕದಲ್ಲಿ ಬಸ್ ಹಿಂಬದಿಗೆ ಬೈಕ್ ಢಿಕ್ಕಿ : ಶಿಕ್ಷಕನಿಗೆ ಗಂಭೀರ ಗಾಯ

0

ಬಸ್ ಹಿಂಬದಿಗೆ ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಶಿಕ್ಷಕ ಗಂಭೀರವಾಗಿ ಗಾಯಗೊಂಡ ಘಟನೆ ಅರಂಬೂರಿನ ಪಾಲಡ್ಕದಲ್ಲಿ ಮಾ.1ರಂದು ಬೆಳಿಗ್ಗೆ ಸಂಭವಿಸಿದೆ.

ಖಾಸಗಿ ಶಾಲೆಯ ಶಿಕ್ಷಕ ಪದ್ಮನಾಭ ಎಂಬವರು ಬೆಳಿಗ್ಗೆ ಸಂಪಾಜೆ ಕಡೆಗೆ ತೆರಳುತ್ತಿದ್ದ ವೇಳೆ ಮುಂಭಾಗದಿಂದ ತೆರಳುತ್ತಿದ್ದ ಖಾಸಗಿ ಬಸ್ ಗೆ ಬೈಕ್ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರ ಶಿಕ್ಷಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.