ಬೆಟ್ಟಂಪಾಡಿ ಕೊರಗಜ್ಜ ದೈವದ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಸುಳ್ಯಕಸಬಾದ
ಬೆಟ್ಟಂಪಾಡಿ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ
ಶ್ರೀದೈವದನೇಮೋತ್ಸವವು ಮಾ.19 ರಂದು ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಯು
ಫೆ.29 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೊರಗಜ್ಜ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಚಿದಾನಂದ ವಿದ್ಯಾನಗರ, ಉತ್ಸವ ಸಮಿತಿ ಅಧ್ಯಕ್ಷೆ ಶ್ರೀಮತಿ ಲತಾ ಮಧುಸೂದನ್, ಉಪಾಧ್ಯಕ್ಷ ಸುನಿಲ್ ಕುಮಾರ್ ಬೆಟ್ಟಂಪಾಡಿ, ನಗರ ಪಂಚಾಯತ್ ಸದಸ್ಯ ಬುದ್ಧ ನಾಯ್ಕ್‌ ಹಳೆಗೇಟು, ಖಜಾಂಜಿ ಚಂದ್ರರಾವ್ ಬೆಟ್ಟಂಪಾಡಿ, ಆನಂದ ಬೆಟ್ಟಂಪಾಡಿ, ರವೀಶ ಪಡ್ಡಂಬೈಲು, ಸುರೇಶ ಬೆಟ್ಟಂಪಾಡಿ, ಅನೂಪ್ ಪೈ ಬೀರಮಂಗಲ, ಶಾರದಾ ಶಿವಾಜಿ ರಾವ್, ಗೀತಾ ಎ, ಧರಣಿಮಣಿ, ಭವಾನಿ ಛತ್ರಪತಿ ನಗರ,
ಶ್ರೀಮತಿ ರಾಧಮೋಹನ ಮುಗೇರ ಹಾಗೂ ಮನೆಯವರು ಉಪಸ್ಥಿತರಿದ್ದರು.
ಆನಂದ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು.