ಸಂಪಾಜೆ: ಬೈಕ್ – ಬೈಕ್ ಢಿಕ್ಕಿ

0

ದಂಪತಿ ಸೇರಿದಂತೆ ಮೂವರಿಗೆ ಗಾಯ

ಓವರ್ ಟೇಕ್ ಮಾಡುವ ಯತ್ನದಲ್ಲಿ ಬೈಕ್ ಗಳ ಮಧ್ಯೆ ಪರಸ್ಪರ ಅಪಘಾತ ಸಂಭವಿಸಿ, ದಂಪತಿ ಸೇರಿದಂತೆ ಮೂವರು ಗಾಯಗೊಂಡ ಘಟನೆ ಸಂಪಾಜೆ ಗ್ರಾಮದ ಮಸೀದಿಯ ಬಳಿ ಮಾ.1ರಂದು ಅಪರಾಹ್ನ ಸಂಭವಿಸಿದೆ.

ಬೈಕ್ ಗಳೆರಡು ಮಡಿಕೇರಿಯಿಂದ ಸುಳ್ಯದ ಕಡೆಗೆ ಬರುತ್ತಿದ್ದು, ಓವರ್ ಟೇಕ್ ಮಾಡುವ ಯತ್ನದಲ್ಲಿ ಬೈಕ್ – ಬೈಕ್ ಢಿಕ್ಕಿ ಹೊಡೆದುಕೊಂಡಿದ್ದು, ಒಂದು ಬೈಕಿನಲ್ಲಿದ್ದ ದಂಪತಿ ಸೇರಿದಂತೆ ಮೂವರಿಗೆ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಮಿಥುನ್ ಬಂಟೋಡಿ ಎಂಬ ಯುವಕನ ಕಾಲು ಮುರಿತಗೊಂಡಿರುವುದಾಗಿ ತಿಳಿದುಬಂದಿದೆ. ಅವರ ಪುತ್ರಿಗೂ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.