ಆಲೆಟ್ಟಿ ರಸ್ತೆಯಲ್ಲಿ ಮೋರಿ ರಚನೆ- ಘನ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆಯಲ್ಲಿ ಅವಕಾಶ

0

ಆಲೆಟ್ಟಿ ಮುಖ್ಯ ರಸ್ತೆಯ ತಿರುವಿನಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ‌ಹೊಸದಾಗಿ ಮೋರಿ ನಿರ್ಮಾಣ ಕಾರ್ಯವು ನಡೆಯುತ್ತಿದ್ದು ಬಡ್ಡಡ್ಕ ಹಾಗೂ ಕೇರಳದ ಕಲ್ಲಪಳ್ಳಿ ಪಾಣತ್ತೂರು ಕಡೆಗೆ ಸಂಚರಿಸುವ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪರ್ಯಾಯ ರಸ್ತೆಯಾಗಿ ನಾರ್ಕೋಡು ದ್ವಾರದ ಬಳಿಯಿಂದ 200 ಮೀಟರ್ ಮುಂದೆ ಸಾಗಿ ಬಲ ಬದಿಯಿಂದ ಕುಡೆಕಲ್ಲು ಐನ್ ಮನೆಗೆ ಹೋಗುವ ರಸ್ತೆಯ ಮೂಲಕ ಭೂತಕಲ್ಲು ಮಾರ್ಗವಾಗಿ ಎಲಿಕ್ಕಳ ಎಂಬಲ್ಲಿಗೆ ಸಂಪರ್ಕಿಸುವ ರಸ್ತೆಯಿಂದಾಗಿ ಬಡ್ಡಡ್ಕ ಮತ್ತು ಕೇರಳದ ಕಡೆಗೆ ಸಂಚರಿಸಬಹುದು. ಲೋಕೋಪಯೋಗಿ ಇಲಾಖೆಯ ವತಿಯಿಂದ ಸೂಚನೆ ಫಲಕ ‌ಹಾಕಲಾಗಿದೆ.